ಚೆನ್ನ ಶಿಕ್ಷಣ ಸಿರಿ

Author : ಟಿ.ಆರ್. ಮಹಾದೇವಯ್ಯ

Pages 298

₹ 70.00




Year of Publication: 1999
Published by: ಡಾ. ಚನ್ನಪ್ಪ ಎರೇಸೀಮೆ ಅಭಿನಂದನಾ ಸಮಿತಿ
Address: ಸಿದ್ಧಗಂಗಾ ಚೌಟ್ರಿ, 14, 1ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಮಂಜುನಾಥ ನಗರ, ಬೆಂಗಳೂರು-560010

Synopsys

ವಿದ್ವಾಂಸ, ಖ್ಯಾತ ಪ್ರವಚನಕಾರ, ಸಂಶೋಧಕ ಪಂಡಿತ ಚನ್ನಪ್ಪ ಎರೇಸೀಮೆ ಅವರ ಅಭಿನಂದನಾ ಗ್ರಂಥ-ಚೆನ್ನ ಶಿಕ್ಷಣ ಸಿರಿ. ಟಿ.ಆರ್ ಮಹಾದೇವಯ್ಯ ಅವರು ಸಂಪಾದಿಸಿದ್ದಾರೆ. ಪಂಡಿತ ಚನ್ನಪ್ಪ ಎರೇಸೀಮೆ ಅವರ ಶಿಕ್ಷಣದ ತಾತ್ವಿಕ ತಳಹದಿ, ಅವರ ಶೈಕ್ಷಣಿಕ ಅಲೆಗಳು, ಶೈಕ್ಷಣಿಕ ವಿಧಿ-ವಿಧಾನಗಳು ಹಾಗೂ ಪಂಡಿತ ಚನ್ನಪ್ಪ ಎರೇಸೀಮೆ ಕುರಿತು ಇಂಗ್ಲಿಷ್ ನಲ್ಲಿ ಬರೆದ ಲೇಖನಗಳ ಸಂಗ್ರಹ -ಹೀಗೆ ಪ್ರಮುಖ ನಾಲ್ಕು ವಿಭಾಗಗಳಲ್ಲಿ ಅವರ ಬಹುಮುಖದ ಸಮಗ್ರ ಆಯಾಮಗಳ ಹಿರಿಮೆಗಳನ್ನು ಕೃತಿಯಲ್ಲಿ ಅನಾವರಣ ಗೊಳಿಸಲಾಗಿದೆ.

About the Author

ಟಿ.ಆರ್. ಮಹಾದೇವಯ್ಯ
(06 December 1934)

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಟಿ.ಆರ್ ಮಹಾದೇವಯ್ಯ, ಹುಟ್ಟೂರಿನಲ್ಲೇ (ಜನನ:06-12-1934) ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದರು. ತಂದೆ-ರುದ್ರಯ್ಯ, ತಾಯಿ ಹೊನ್ನಮ್ಮ. ತುಮಕೂರಿನಲ್ಲಿ ಬಿ.ಎ.ಪದವಿ ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು., ಬೆಂಗಳೂರಿನ ರೇಣುಕಾಚಾರ್ಯ ಮಹಾವಿದ್ಯಾಲಯದಲ್ಲಿ ಹಾಗೂ ಕೆಎಲ್ ಇ ಸಂಸ್ಥೆಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇದರ ಜೊತೆ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಘಂಟು, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಕೋಶ ಸಿದ್ಧತೆ ಕಾರ್ಯದಲ್ಲೂ ಮಹತ್ವ ಪಾತ್ರ ನಿರ್ವಹಿಸಿದ್ದಾರೆ.ಕರ್ನಾಟಕ ರಾಜ್ಯಭಾಷಾ ಆಯೋಗದ ಸದಸ್ಯರಾಗಿದ್ದರು. ಕೃತಿಗಳು: ಡಿ.ಎಂ. ಚಂದ್ರಶೇಖರ್, ಮಲ್ಲಿಕಾರ್ಜುನ ...

READ MORE

Related Books