ಚಿದಂಬರ ಸ್ವಾರಸ್ಯ

Author : ಗೌರೀಶ ಕಾಯ್ಕಿಣಿ

Pages 60

₹ 25.00




Year of Publication: 1997
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಚಿದಂಬರ ಸ್ವಾರಸ್ಯ’ ಲೇಖಕ ಗೌರೀಶ ಕಾಯ್ಕಿಣಿ ಅವರು ರಚಿಸಿರುವ ಸಾಮಾಜಿಕ ನಾಟಕ. ಈ ಕೃತಿಯ ಕುರಿತು ಬರೆಯುತ್ತಾ ಈ ನಾಟಕವು ಇಂದು ಪ್ರಕಟಣಾವಾಗುತ್ತಿರುವುದಕ್ಕೆ ನನಗೆ ಪರಮ ಧನ್ಯತೆ ಅನಿಸುತ್ತದೆ. ಇದನ್ನು ರಚಿಸಿ ಒಂದು ದಶಕಕ್ಕೂ ಮೀರಿ ಕಾಲಗತಿಸಿರಬೇಕು. ನಾನು ಜೀವಾವಧಿ ಸೇವೆ ಸಲ್ಲಿಸುತಿದ್ದ ನಮ್ಮ ಶ್ರೀಭದ್ರಕಾಳಿ ಹೈಸ್ಕೂಲಿನ ನನ್ನ ಅಭಿಮಾನಿ ಮಿತ್ರರಾದ ಅಧ್ಯಾಪಕರೆಲ್ಲ ಅಂದಿನ ವಾರ್ಷಿಕೋತ್ಸವದಲ್ಲಿ ಕೇವಲ ನನ್ನ ಪ್ರೀತ್ಯಾರ್ಥವಾಗಿ ನಾನೇ ರಚಿಸಿದ ಒಂದು ನಾಟಕವನ್ನು ಆಡುವೆವೆಂದು ಆಗ್ರಹ ಹಿಡಿದರು. ಮಕ್ಕಳ ಹಟದಂತೆ ಮಕ್ಕಳನ್ನು ಕಲಿಸುವ ಮಕ್ಕಳ ಮನಸ್ಸಿನವರೇ ಆದ ಈ ಮೇಷ್ಟ್ರುಗಳ ಹಟಕ್ಕೆ ಬಗ್ಗದವರಾರು. ಅದೂ ನಾನೂ ಅವರ ಗೋತ್ರದವನೇ ಆಗಿರುವಾಗ. ಅದರ ಫಲವೇ ಈ ಕೃತಿ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಜೊತೆಗೆ ಚಿದಂಬರ ಸ್ವಾರಸ್ಯದ ಮೂಲ ಹೆಸರು ಚಿದಂಬರ ರಹಸ್ಯವಾಗಿತ್ತು. ಆದರೆ ಈ ಹೆಸರು ಈ ಹಿಂದೆಯೇ ಪ್ರಸಿದ್ಧ ಲೇಖಕ ಶ್ರೀ ಪೂಚಂತೆಯವರ ಒಂದು ಕಾದಂಬರಿಯು ಹೊತ್ತಿದೆ. ಅಲ್ಲದೆ ಈ ಮಾತು ಒಂದು ಪಡೆನುಡಿಯಾಗಿ ಬುನಾದಿಯಿಂದಲೂ ವಾಡಿಕೆಯಲ್ಲಿದೆ. ಅಲ್ಲದೆ ಈ ವಸ್ತುವಿನಲ್ಲಿ ರಹಸ್ಯವಿದ್ದುದು ಸ್ವಾರಸ್ಯವಾಗಿಯೇ ವಿಕಾಸಗೊಂಡಿದೆ. ಪಾತ್ರಗಳ ಮಟ್ಟಕ್ಕೆ ಅದು ರಹಸ್ಯ. ಆದರೆ ಪ್ರೇಕ್ಷಕರ ಪಾಲಿಗೆ ದೊಡ್ಡ ಸ್ವಾರಸ್ಯ. ಮೂಲ ನಾಟಕದ ಹೆಸರು A Great Adventure ಅದಕ್ಕಿಂತ ಈ ಹೆಸರು ಹೆಚ್ಚು ಕೌತುಕದ್ದು. ನಾಟಕವು ಮೂಲಕೃತಿಗೆ ಅಷ್ಟು ನಿಷ್ಠವಾಗಿಲ್ಲ. ಅನಿವಾರ್ಯವಾಗಿ ನಮ್ಮ ದೇಶ ಕಾಲ ಸ್ಥಿತಿ ಗತಿಗೆ ಆ ವಸ್ತುವನ್ನು ತುಸು ಸ್ವತಂತ್ರವಾಗಿ ರೂಪಿಸಬೇಕಾಯಿತು.

ಈ ನಾಟಕವು ನನ್ನ ಅಧ್ಯಾಪಕ ಸಹೋದರರು ರಂಗದಲ್ಲಿ ತರುವಾಗ ಇನ್ನೊಂದು ಸ್ವಾರಸ್ಯ ಅವಾಂತರವಾಗಿ ರಂಗದ ಹೊರಗೇ ಘಟಿಸಿತು. ನಾಟಕದಲ್ಲಿ ಒಬ್ಬ ಡಾಕ್ಟರನ ಪಾತ್ರವಿದೆ. ಅದಕ್ಕೆ ಒಂದು ವೈಶಿಷ್ಟ್ಯವನ್ನು ತರಲು ಆ ಡಾಕ್ಟರನನ್ನು ತುಸು ಕಿವುಡನಾಗಿ ಮಾಡಿದ್ದೆ. ನನ್ನ ನಿಕಟ ಮಿತ್ರರೊಬ್ಬರು ಕಿವುಡರಿದ್ದರು. ಅವರ ಕರ್ಣೋಪಕರಣವನ್ನು ಬಳಸುವ ಕಲ್ಪನೆ ನನಗೆ ಹೇಗೋ ಉಂಟಾಯಿತು. ಆದರೆ ಆದರಿಂದ ಮುಂದೆ ಒಂದು ಕರ್ಣಪಿಶಾಚಿಯೇ ಧುತ್ತೆಂದು ಮುಂದೆ ಬಂದಿತ್ತು. ನನ್ನ ಗೆಳೆಯನ ಪತ್ನಿ ಸಹಜವಾಗಿಯೇ ಆ ಕಿವುಡನ ಪಾತ್ರ ತನ್ನ ಪತಿಯ ವಿಡಂಬನೆಗಾಗಿ ನಾನು ಸೃಷ್ಟಿಸಸಿದೆನೆಂದು ಭಾವಿಸಿ ಭುಗಿಲೆದ್ದಳು. ನಮಗೂ ದಿಗಿಲೆಬ್ಬಿಸಿದಳು. ಆದರೂ ಆಸಾಧ್ವಿಯು ಮುಂದೆ ಸಾಂತ್ವನೆಗೊಂಡಳು(ನನ್ನ ಬಡಮಿತ್ರನಿಗೆ ಇದೆಲ್ಲ ತಿಳಿಯಲಿಲ್ಲ. ಆತ ಕಿವಿಗೊಡಲೇ ಇಲ್ಲ). ಹೀಗೆ ರಂಗದ ಹೊರಗೆ ಮತ್ತು ಮುಂಚೆಯೂ ನನ್ನ ಪಾಲಿಗೆ ಇದೊಂದು ಅವಿಸ್ಮರಣೀಯ ಅನುಭವವಾಯಿತು ಎಂದು ತಮ್ಮ ವಿಶಿಷ್ಟ ಅನುಭವಗಳನ್ನು ತಿಳಿಸಿದ್ದಾರೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books