ಚಿದಾನಂದ ಕಿರಣ

Author : ಆರ್. ಶೇಷಶಾಸ್ತ್ರಿ

Pages 340

₹ 275.00




Year of Publication: 2021
Published by: ಸಪ್ಮ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ ಬೆಂಗಳೂರು-560 009
Phone: 40114455

Synopsys

ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಚಿಂತನೆ ಮತ್ತು ಕನ್ನಡಪರ ಹೋರಾಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಡಾ. ಎಂ. ಚಿದಾನಂದಮೂರ್ತಿ ಅವರ ಬದುಕು-ಸಾಧನೆಯ ಅವಲೋಕನ ಮಾಡಿರುವ ಸಂಸ್ಮರಣ ಸಂಪುಟ ‘ಚಿದಾನಂದ ಕಿರಣ’.

ಹಿರಿಯ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಅವರು ಈ ಕೃತಿಯ ಸಂಪಾದಕರು. ಚಿದಾನಂಮೂರ್ತಿ ಅವರ ಪ್ರಕಟಿತ ಎಲ್ಲ ಕೃತಿಗಳ ಮತ್ತು ಕನ್ನಡ ಹೋರಾಟದ ಪರಿಚಯ, ಪ್ರಕಟವಾಗಿರುವ ಸಂದರ್ಶನ ಮತ್ತು ಅವರ ವ್ಯಕ್ತಿತ್ವವನ್ನು ಕುರಿತು ಅವರ ಸಮಕಾಲೀನರು, ಕಿರಿಯರು ಬರೆದರುವ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.  ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕ ಚಿದಾನಂದಮೂರ್ತಿಯವರು ಭಾಷಾಶಾಸ್ತ್ರ, ಶಾಸನ ಶೋಧ, ಸಂಸ್ಕೃತಿ ಚಿಂತನೆ, ಛಂದಸ್ಸು, ಗ್ರಂಥ ಸಂಪಾದನೆ, ಜಾನಪದ ಅಧ್ಯಯನ ಹೀಗೆ ಹಲವು ಜ್ಞಾನಶಿಸ್ತುಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಬಹು ಆಯಾಮಗಳಲ್ಲಿ ನಾಡು-ನುಡಿಗೆ ಶ್ರಮಿಸಿದ ಅಪ್ರತಿಮ ಹೋರಾಟಗಾರ, ಕನ್ನಡ ಸಂಸ್ಕೃತಿ-ಭಾರತೀಯ ಸಂಸ್ಕೃತಿಗಳ ನೈಜ ಆರಾಧಕ ಚಿದಾನಂದಮೂರ್ತಿಯವರ ಸಿದ್ದಿ-ಸಾಧನೆಯ ಎಲ್ಲ ಮಗ್ಗಲುಗಳನ್ನು ಅವಲೋಕಿಸುವ ನೆನಪಿನ ಸಂಪುಟ ‘ಚಿದಾನಂದ ಕಿರಣ’.

 

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books