ಚಿಚ್ಛಕ್ತಿ ಪ್ರಭಾವ

Author : ನುಲೇನೂರು ಶ್ರೀಮೂರ್ತಿ

Pages 511

₹ 350.00




Year of Publication: 2017
Published by: ಲೋಕ ಶಿಕ್ಷಣ ಟ್ರಸ್ಟ್
Address: ನಂ.2, ದಿವಾಕರ ಭವನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಬೆಂಗಳೂರು- 560025
Phone: 08022214392

Synopsys

‘ಚಿಚ್ಛಕ್ತಿ ಪ್ರಭಾವ’ ಲೇಖಕ ನುಲೇನೂರು ಶ್ರೀಮೂರ್ತಿ ಅವರ ಕೃತಿ. ವಿಷಯವು ಏಕದೇಶೀಯವಾಗಿರದೆ ತತ್ತ್ವಶಾಸ್ತ್ರ, ವೇದಾಂತದರ್ಶನ, ಯೋಗಶಾಸ್ತ್ರ- ಮಂತ್ರಶಾಸ್ತ್ರಗಳು, ಭೌತವಿಜ್ಞಾನ, ಮನೋವಿಜ್ಞಾನ, ಸಾಕ್ಷಾತ್ಕಾರಾನುಸಂಧಾನ ಪ್ರಕ್ರಿಯೆ- ಈ ಆಯಾಮಗಳನ್ನು ಒಳಗೊಂಡಿರುವುದು. ಈ ವಿವಿಧ ಅನುಸಂಧಾನ ಸ್ತರಗಳೆಲ್ಲದರಲ್ಲೂ ಸಮಾನ ಅಂತರ್ವಾಹಿಯಾಗಿರುವ ಕಾರಣದಿಂದಲೇ ಚಿಚ್ಛಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಲೇಖಕರು ಮಂಡಿಸಿರುವುದು. ಅಂತರಂಗಸಾಧನೆಯ ಈ ವಿವಿಧ ಸ್ತರಗಳು ಪರಸ್ಪರ ಪೂರಕಗಳೆಂಬುದು ಸ್ಪಷ್ಟವೇ ಆಗಿದೆ. ಹೀಗಿರುವುದರಿಂದ ಚಿಚ್ಛಕ್ತಿ ಪ್ರಭಾವವನ್ನು ವಿವಿಧ ಭಂಗ್ಯಂತರಗಳಿಂದ ಗ್ರಹಿಸುವುದು ಬೋಧಪ್ರದ. ಚಿಚ್ಛಕ್ತಿ ಪ್ರಭಾವ ಎಂಬ ಪ್ರಧಾನ ಶೀರ್ಷಿಕೆಯೊಡಗೂಡಿ ಸಮಗ್ರ ಜೀವನ ಎಂಬ ಉಪಶೀರ್ಷಿಕೆಯನ್ನು ಈ ಕೃತಿಗೆ ನೀಡಿದ್ದಾರೆ.

About the Author

ನುಲೇನೂರು ಶ್ರೀಮೂರ್ತಿ

ನುಲೇನೂರು ಶ್ರೀಮೂರ್ತಿ (ಶ್ರೀನಿವಾಸಮೂರ್ತಿ) ಅವರು ಚಿತ್ರದುರ್ಗ ಜಿಲ್ಲೆಯ ನುಲೇನೂರಿನ ದತ್ತಾಶ್ರಮದ (1939-89ವರೆಗೆ) ಸಾಧಕರು. 20ನೇ ಶತಮಾನದ (1906ರಲ್ಲಿ ಜನನ) .ಆರಂಭದಲ್ಲಿದ್ದವರು. ಎರಡೂವರೆ ವರ್ಷ (1926ರಿಂದ )  ಕಾಲವಷ್ಟೇ ಉದ್ಯೋಗದಲ್ಲಿದ್ದು, ನಂತರ ವಿರಕ್ತ ಜೀವನ ಕಳೆದರು.  ಸ್ವಾಮಿ ರಾಮತೀರ್ಥರ ವೇದಾಂತ ಉಪನ್ಯಾಸಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದರು. ‘ಚಿಚ್ಛಕ್ತಿ ಪ್ರಭಾವ’ ಅವರ ಈ ಕೃತಿಯು ತತ್ವಶಾಸ್ತ್ರ, ವೇದಾಂತ ಶಾಸ್ತ್ರ, ಮನೋವಿಜ್ಞಾನ, ಯೋಗಶಾಸ್ತ್ರ, ಮಂತ್ರಶಾಸ್ತ್ರ ಹೀಗೆ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಭಾರತ ಮಾತೆಯ ಸ್ವಾತಂತ್ಯ್ರ ಸಂರಕ್ಷಣೆ ಎಂಬ ಪ್ರಬಂಧವು ರಾಷ್ಟ್ರ ಚಿಂತನೆಗಳನ್ನು ಒಳಗೊಂಡಿದ್ದು, ಚಿಚ್ಛಕ್ತಿ ಪ್ರಭಾವದಲ್ಲಿ ಸೇರ್ಪಡೆಯಾಗಿದೆ.  1963ರಲ್ಲಿ ಪ್ರಕಟವಾದ ಚಿಚ್ಛಕ್ತಿ ಪ್ರಭಾವ ...

READ MORE

Related Books