ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ

Author : ಹೆಚ್.ಎಂ. ನಾಗರಾಜರಾವ್

Pages 184

₹ 100.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಚಿಕ್ಕ ದೇವರಾಜ ಒಡೆಯರಿಗೆ ಮೈಸೂರಿನ ಆಡಳಿತಲ್ಲಿ ವಿಶಿಷ್ಟ ಸ್ಥಾನವಿದೆ. ಮೈಸೂರು ಒಡೆಯರ ಇತಿಹಾಸದಲ್ಲಿ ಕ್ರಿ.ಶ 1672 ರಿಂದ 1704ರವರೆಗೆ ಆಳ್ವಿಕೆ ನಡೆಸಿದ ಚಿಕ್ಕದೇವರಾಜ ಒಡೆಯರು , ಎಲ್ಲಾ ಕಾಲಘಟ್ಟದಂತೆ ಆಗಲೂ ಇದ್ದ ರಾಜಕೀಯ ಯುದ್ಧದ ನಡುವೆಯೂ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಅಪಾರವಾಗಿ ಪ್ರೋತ್ಸಾಹ ನೀಡುತಿದ್ದರು. ಸ್ವತಃ ಕವಿಯೂ, ಸಾಹಿತ್ಯ ಪೋಷಕರೂ ಆಗಿದ್ದ ಚಿಕ್ಕದೇವರಾಯರ ಬಗ್ಗೆ ಆತನ ಸ್ವಂತ ಆಸ್ಥಾನದಲ್ಲೇ ಇದ್ದ ಕವಿ ತಿರುಮಲರಾಯರು ಈ ಕೃತಿಯನ್ನು ರಚಿಸಿದ್ದಾರೆ. ಹಳಗನ್ನಡ ಸಾಹಿತ್ಯದ ಈ ಕೃತಿಯನ್ನು ನಾಗರಾಜ್ ರಾವ್‌ರವರು ಬಲು ಎಚ್ಚರಿಕೆಯಿಂದ ಮೂಲ ವಾಸ್ತವಕ್ಕೆ ಧಕ್ಕೆ ಬರದಂತೆ, ಯಾವುದೇ ಅರ್ಥ ವ್ಯತ್ಯಾಸವಾಗದಂತೆ ಕೃತಿಯ ವಸ್ತು ಮತ್ತು ವ್ಯಾಕರಣಕ್ಕೆ ಧಕ್ಕೆ ಬಾರದಂತೆ ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಹೆಚ್.ಎಂ. ನಾಗರಾಜರಾವ್

ಕವಿ ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ ಕೃತಿಯನ್ನು ಸಂಪಾದಿಸಿರುವ ಹೆಚ್‌.ಎಂ. ನಾಗಾರಾಜರಾವ್‌ ಅವರು ಹಿರಿಯ ವಿದ್ವಾಂಸರು. ಚಿಕ್ಕಮಗಳೂರು ಮೂಲದವರಾದ ಈ ಹಿರಿಯ ಲೇಖಕರು ಹಲವು ಹಳಗನ್ನಡ ಪಠ್ಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ...

READ MORE

Related Books