ಚಿಲಿಯಲ್ಲಿ ಭೂಕಂಪ-ಹದಿನೆಂಟು ಕಥನಗಳು

Author : ಬಿ.ಎ. ವಿವೇಕ ರೈ

Pages 90

₹ 75.00




Published by: ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ
Address: ಮಂಗಳೂರು

Synopsys

ಚಿಲಿಯಲ್ಲಿ ಭೂಕಂಪ ಜರ್ಮನ್ ಕತೆಗಾರ ಹೀನ್ರಿಶ್ ಕೆಯಿಸ್ಟನ ಕತೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧಗಳು, ಜಗತ್ತನ್ನು ಪೊರೆಯುವ ಪ್ರೀತಿಯನ್ನು ಧರ್ಮದ ಕ್ರೌರ್ಯ ತನ್ನ ಉಗುರುಗಳಿಂದ ಸೀಳುವ ಹೊತ್ತಿನಲ್ಲಿ ಅದಕ್ಕೆ ಪ್ರಬಲ ಪ್ರತಿರೋಧವೋ ಎಂಬಂತೆ ಸಂಭವಿಸುವ ಭೂಕಂಪ ಈ ಕತೆಯ ಪ್ರಧಾನ ರೂಪಕವಾಗಿದೆ. ಮನುಷ್ಯ ಸಂಬಂಧಗಳು ನೆಲಕಚ್ಚುವ ಸಂದರ್ಭವನ್ನು ಈ ಕತೆ ಹಿಡಿದಿಡುತ್ತದೆ. ಇಂತಹ ಹೃದಯಸ್ಪರ್ಶಿ ಹದಿನೆಂಟು ಕಥನಗಳನ್ನು ವಿವೇಕ ರೈ ಅವರು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಹೆರ್ತಾ ಮುಲ್ಲರ್‌ಳ “ಬೀದಿ ಗುಡಿಸುವ ಜಾಡಮಾಲಿಗಳು' ಇಂತಹದೇ ವಿಷಾದವನ್ನು ಹೊದ್ದುಕೊಂಡ ಇನ್ನೊಂದು ಕತೆ. ವೈವಿಧ್ಯಮಯ ಕಥನದ ಮಾದರಿಗಳನ್ನು ಇಲ್ಲಿ ಲೇಖಕರು ಮುಖಾಮುಖಿಯಾಗಿಸಿದ್ದಾರೆ. ಈ ಕಾರಣದಿಂದಲೇ ಅವರು ತೆನಾಲಿರಾಮನ ಬದನೆ ಕದ್ದ ಕತೆ, ಗುಬ್ಬಚ್ಚಿ ಕತೆ, ಹಿಮಗೌರಿ ಮತ್ತು ಏಳು ಜನ ಕುಳ್ಳರಿಗೆ ಸಂಬಂಧಿಸಿದ ಕತೆಗಳನ್ನೂ ಸೇರಿಸಿದ್ದಾರೆ. ಇಲ್ಲಿರುವ ಕತೆಗಳು ದೇಶ, ಧರ್ಮ, ಭಾಷೆಯ ಗಡಿಗಳನ್ನು ಅಳಿಸಿ, ನಮ್ಮನ್ನು ಪರಸ್ಪರ ಬೆಸೆಯುವಂತೆ ಮಾಡುತ್ತದೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books