ಚಿನ್ನಮ್ಮನ ಲಗ್ನ- 1893

Author : ಕೆ. ಸತ್ಯನಾರಾಯಣ

Pages 176

₹ 170.00




Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

ಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತ ಟಿಪ್ಪಣಿಗಳಿರುವ ಕೃತಿ-‘ಚಿನ್ನಮ್ಮನ ಲಗ್ನ- 1893’ ಲೇಖಕ ಕೆ. ಸತ್ಯನಾರಾಯಣ ಅವರು ರಚಿಸಿದ್ದು, ಪ್ರೊ. ಕೆ. ಸುಂದರರಾಜ್ ಅವರು ಬೆನ್ನುಡಿ ಬರೆದಿದ್ದಾರೆ. ಕನ್ನಡದ ಮಹತ್ವದ ಬರಹಗಾರ ಕೆ.ಸತ್ಯನಾರಾಯಣ ಅವರು ತಮ್ಮಿಷ್ಟದ ಲೇಖಕ ಕುವೆಂಪು ಅವರ - ಮಲೆಗಳಲ್ಲಿ ಮದುಮಗಳು ಕಾದಂಬರಿಯ ಓದಿಗಾಗಿ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಕೃತಿಯಾಗಿ ಪ್ರಕಟಿಸಿದ್ದಾರೆ.

ಕುವೆಂಪು ಅವರ ಕಾದಂಬರಿಗಷ್ಟೇ ಅಲ್ಲದೇ ಈ ಕೃತಿಯು, ಸಾಹಿತ್ಯದ ಓದಿಗೂ ಒಂದು ಅತ್ಯುತ್ತಮ ಆಕರ ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ. ಕಾದಂಬರಿಯ ಪ್ರತಿ ಅಧ್ಯಾಯವನ್ನೂ ಎಳೆ ಎಳೆಯಾಗಿ ತುಲನಾತ್ಮಕವಾಗಿ ಪರೀಕ್ಷಿಸಿ, ಕಾದಂಬರಿಯ ಸಂಕೀರ್ಣತೆಯನ್ನು ಎಲ್ಲಿಯೂ ಮರೆಯದೇ, ಆಳವಾಗಿ ಮತ್ತು ಸಮಗ್ರವಾಗಿ ಚಿಂತಿಸಿ, ಅತ್ಯಂತ ಸರಳ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಈ ರೀತಿಯ ಪಠ್ಯ ಕೇಂದ್ರಿತವಾದ. ಯಾವ ಸಮಕಾಲೀನ ಥಿಯರಿಗಳ ಹಂಗೂ ಇಲ್ಲದ, ಸಾಹಿತ್ಯದ- ಕಾದಂಬರಿಯ ಮೇಲೆ ಹಾಗೂ ಒಟ್ಟಾರೆಯಾಗಿ ಕನ್ನಡದಲ್ಲಿ ಈವರೆಗೂ ಪ್ರಕಟವಾಗಿರುವ ಇಂತಹ ಬೃಹತ್ ಕಾದಂಬರಿಗಳ ಪ್ರಕಾರದ ಮೇಲೆಯೇ ಇಟ್ಟಿರುವ ನಂಬಿಕೆಯೂ ಅಪಾರ.  ಕಾದಂಬರಿಯಿಂದಲೇ ಎಲ್ಲ ಓದನ್ನೂ ಸಾಧ್ಯಗೊಳಿಸಬಹುದಾದ ಈ ರೀತಿಯ ಓದು ವಿಶಿಷ್ಟವಾದದು.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Conversation

Related Books