ಚಿಣ್ಣರ ಲೋಕದಲ್ಲಿ ಕಾರಂತರು ಭಾಗ-2

Author : ಮಾಲಿನಿ ಮಲ್ಯ

Pages 347

₹ 0.00




Year of Publication: 2016
Published by: ಎಸ್.ಬಿ.ಎಸ್ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್
Address: ರೈಲ್ವೇ ಪ್ಯಾರಲಲ್ ರೋಡ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು- 560001

Synopsys

‘ಚಿಣ್ಣರ ಲೋಕದಲ್ಲಿ ಕಾರಂತರು ಭಾಗ-2’ ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದ ಕತೆಗಳ ಸಂಕಲನ. ಕಾರಂತರ ಕತೆಗಳನ್ನು ಲೇಖಕಿ ಬಿ.ಮಾಲಿನಿ ಮಲ್ಯ ಸಂಪಾದಿಸಿದ್ದಾರೆ. ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಅನೇಕ ಮೌಡ್ಯ, ನಂಬಿಕೆಗಳು ಮಕ್ಕಳ ಕುತೂಹಲಗಳನ್ನು ಹೆಚ್ಚಿಸುತ್ತವೆ. ಅದೇಕೆ ಹೀಗೆ, ಇದೇಕೆ ಹೀಗೆ ಎಂದು ಹಿರಿಯರಲ್ಲಿ ಕೇಳುತ್ತಾರೆ. ಆದರೆ ಅದಕ್ಕೆ ಸಿಗುವ ಉತ್ತರವೂ ಮೌಢ್ಯಗಳದ್ದೇ ಆಗಿದ್ದರೆ ಆ ಮಕ್ಕಳ ಮನಸ್ಸಿನಲ್ಲಿ ಅದೇ ಮೌಡ್ಯ ಬಿತ್ತಿದಂತಾಗುತ್ತದೆ. ಆದರೆ ಈ ಕೃತಿ ಮಕ್ಕಳ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳನ್ನು ನೀಡುತ್ತದೆ. ಕಾರಂತರು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವಾಗ ಮಕ್ಕಳು ಅರ್ಥಮಾಡಿ ಕೊಳ್ಳಬಲ್ಲ ರೀತಿಯಲ್ಲಿಯೇ ಉತ್ತರಿಸಿ, ಅಂತಹ ನಂಬಿಕೆಗಳು ಅನುಸರಣೀಯವಲ್ಲ ಎಂಬ ಸೂಚನೆಯನ್ನು ಕೊಡುತ್ತಾರೆ. ಅಂತದ್ದೊಂದು ಸ್ಪಷ್ಟನೆ ಈ ಕೃತಿಯಲ್ಲಿ ಲಭಿಸುತ್ತದೆ. 1998ರಲ್ಲಿ ಪ್ರಥಮ ಮುದ್ರಣಕಂಡ ಈ ಕೃತಿ 2016ರಲ್ಲಿ ಐದನೇ ಮುದ್ರಣವನ್ನು ಕಂಡಿದೆ.

About the Author

ಮಾಲಿನಿ ಮಲ್ಯ
(29 June 1951)

ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ,  ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...

READ MORE

Related Books