ಚಿಂತನಧಾರೆ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 136

₹ 60.00




Published by: ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ
Address: ಸುಕ್ಷೇತ್ರ ಹಾರಕೂಡ- 585437

Synopsys

‘ಚಿಂತನಧಾರೆ’ ಕೃತಿಯು ಸಿ. ಪಿ. ಕೃಷ್ಣ ಕುಮಾರ್ ಅವರ ಬರಹಗಳ ಸಂಕಲನವಾಗಿದೆ. ಕನ್ನಡದ ಹಿರಿಯ ಲೇಖಕರೂ ವಿದ್ವಾಂಸರೂ ಆದ ಡಾ.ಸಿ.ಪಿ.ಕೃಷ್ಣಕುಮಾರ್ ತಮ್ಮ ಹೆಸರನ್ನು ಸಿಪಿಕೆ ಎಂದು ಮೂರೇ ಅಕ್ಷರಕ್ಕೆ ಕಿರಿದುಗೊಳಿಸಿಕೊಂಡಷ್ಟೇ ಸಾಂದ್ರವಾಗಿ, ಪರಿಣಾಮಕಾರಿಯಾಗಿ ಬರೆಯಬಲ್ಲ ಲೇಖಕಕರಾಗಿದ್ದೂ, ವಿವಿಧ ಸಂದರ್ಭದಲ್ಲಿ ಅವರು ಬರೆದ 51 ಚಿಂತನೆಗಳ ಧಾರೆ ಇದಾಗಿದೆ. ಇದೂ ಒಂದು ರೀತಿ ಪತ್ರಿಕೆಗಳಿಂದ ಸಾಧ್ಯವಾದ ಸಂವಹನ. ಪ್ರಾಚೀನವನ್ನು ಇಂದಿಗೆ ಪ್ರಸ್ತುತಗೊಳಿಸುವುದು, ಹಳೆಯದಕ್ಕೆ ಹೊಸ ವ್ಯಾಖ್ಯಾನ ನೀಡುವುದು ಇಲ್ಲಿಯ ಬರಹಗಳ ವೈಶಿಷ್ಟ್ಯ. ಆದ್ದರಿಂದಲೇ ಇವು ಹಳೇ ಬೇರು, ಹೊಸ ಚಿಗುರಿಗೆ ಇಷ್ಟವಾಗುವ ಚಿಂತನೆಗಳಾಗಿವೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books