
‘ಚಿಂತನಾಂಕಣ’ ಕೃತಿಯು ಸಂಕಮ್ಮ ಜಿ. ಸಂಕಣ್ಣನವರ ಅವರ ಅಂಕಣ ಬರಹಗಳ ಸಂಕಲನ. ಲೇಖಕಿಯು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಅಚ್ಚುಕಟ್ಟಾಗಿ ಓದುಗರಿಗೆ ತಲುಪಿಸಿದ್ದಾರೆ. ಇದು ನನ್ನ ಚಿಂತನೆ ಎಂದು ಎಲ್ಲಿಯೂ ಹೇರಿಕೆ ಮಾಡದೆ, ಅತ್ಯಂತ ಸಹಜವಾಗಿ, ಎಂಥವರಿಗೂ ಅರ್ಥವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಅಲ್ಲಲ್ಲಿ ತಮ್ಮ ಕುಟುಕು ಮಾತಿನಿಂದ ಲೇಖಕಿಯರ ಬಗೆಗೆ ಸಾಹಿತ್ಯ ವಲಯದಲ್ಲಿ ಇರುವ ಅಸಮಾಧಾನವನ್ನು ಹೊರ ಹಾಕಿದ್ದಾರೆ.
©2025 Book Brahma Private Limited.