
ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳ ಮನೋವಿಕಾಸದ ಹಿನ್ನೆಲೆಯಲ್ಲಿ ಚಿತ್ರಕಲೆಯ ಕುರಿತು ಬರೆದ ಕೃತಿ-ಚಿತ್ರಗಳು ಮಾತನಾಡುತ್ತಿವೆ.ಚಿತ್ರಕಲಾ ಶಿಕ್ಷಣವನ್ನು ಹೇಗೆ ಅರ್ಥೈಸಬೇಕು? ಚಿತ್ರ ಎಂದರೇನು.. ಮಕ್ಕಳು ಬರೆಯುವ ಚಿತ್ರವು ಚಿತ್ರವಾ...? ಹೀಗೆಲ್ಲ ಉದ್ಭವಿಸುವ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಮತ್ತು ಅಧ್ಯಯನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
ಚಿತ್ರಕಲೆಗಿರುವ ಮೌಲ್ಯ ಮತ್ತು ಶೈಕ್ಷಣಿಕವಾಗಿ ಚಿತ್ರಕಲೆಯನ್ನು ಹೇಗೆ ಬಳಸಿದರೆ ಅದಕ್ಕೆ ಪೂರಕವಾಗುತ್ತದೆ ಮತ್ತು ಮೌಲ್ಯಗಳು ಹೆಚ್ಚುತ್ತವೆ ಎಂಬ ಬಗ್ಗೆ ಅಧ್ಯಯನವೊಂದರ ಅನಾವರಣ ಈ ಪುಸ್ತಕದಲ್ಲಿದ್ದು. ಪೋಷಕರು, ಶಿಕ್ಷಕರು ಓದಬೇಕಾದ ಪುಸ್ತಕವಿದು.
©2025 Book Brahma Private Limited.