ಚಿತ್ರಲೇಖಾ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 116

₹ 70.00




Year of Publication: 2007
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘ಚಿತ್ರಲೇಖಾ’ ಕೃತಿಯು ವಿವಿಧ ಲೇಖಕರ  ಅನುವಾದಿತ ಕಥೆಗಳ ಸಂಕಲನವಾಗಿದೆ. ಕೃತಿಯು ಚಿತ್ರಲೇಖಾ ( ಭಗವತೀಚರಣ್ ವರ್ಮಾ), ಹೃದಯ ಒಂದು, ಕತೆ ಸಾವಿರ ( ಅಮೃತ್ ಲಾಲ್ ನಾಗರ್), ಹಾವು ( ಲಖ್ ಮೀ ಖಿಲಾಣೀ), ಮುಖವಾಡ (ಲಖ್ ಮೀ ಖಿಲಾಣೀ), ಉಪಾಯ (ಭೀಷ್ಮ ಸಾಹ್ ನೀ), ಬದಲೂ (ಮಹಾದೇವೀ ವರ್ಮಾ), ತಾಯಿ ( ಪ್ರೇಮ್ ಚಂದ್) ಕಥೆಗಳನ್ನು ಒಳಗೊಂಡಿವೆ. 

ಬೇರೆ ಬೇರೆ ಸಂದರ್ಭಗಳಲ್ಲಿ ಅನುವಾದಿಸಿರುವ ಇಲ್ಲಿನ ಕತೆಗಳಲ್ಲಿ ‘ಹಾವು’ ಮತ್ತು ‘ಮುಖವಾಡ’ ಸಿಂಧೀ ಕತೆಗಳಾಗಿವೆ. ಉಳಿದವುಗಳು ಹಿಂದೀ, ಮೂಲದಿಂದ ಅನುವಾದ ಮಾಡಲಾಗಿದೆ. 1972ರಲ್ಲಿ ಕಸ್ತೂರಿಯಲ್ಲಿ ಪ್ರಕಟವಾಗಿದ್ದ ಅನುವಾದವನ್ನು ಹಾಗೂ ಸಂಗ್ರಹ ಕತೆಗಳನ್ನು ಲೇಖಕ ಚಿತ್ರಲೇಖಾ ಕೃತಿಯ ಮೂಲಕ ಹೊರ ತಂದಿರುತ್ತಾರೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books