ಚಿತ್ರಪಟ ರಾಮಾಯಣ

Author : ಪೃಥ್ವಿರಾಜ ಕವತ್ತಾರು

Pages 112

₹ 100.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಯಕ್ಷಗಾನದ ಕಲಾವಿದರಾದ ಹೊಸ್ತೋಟ ಮಂಜುನಾಥ ಭಾಗವತರ ’ಚಿತ್ರಪಟ ರಾಮಾಯಣ’  ಬಹಳ ವಿಶಿಷ್ಟವಾದ ಕೃತಿಯಾಗಿದೆ.  ಕೃತಿಯ ಪಠ್ಯ ಮತ್ತು ಚಿತ್ರಪಟ ರಾಮಾಯಣದ ಬಗೆಗಿನ ಹನ್ನೊಂದು ಲೇಖನಗಳನ್ನು ಒಳಗೊಂಡ ಈ ಕೃತಿಯನ್ನು ಪತ್ರಕರ್ತ, ಯಕ್ಷಗಾನ ಕಲಾವಿದರಾದ ಪೃಥ್ವಿರಾಜ ಕವತ್ತಾರರು ಸಂಪಾದಿಸಿದ್ದಾರೆ. 

ಚಿತ್ರಪಟ ರಾಮಾಯಣದ ರಂಗಪ್ರಸ್ತುತಿಯನ್ನು ನಿರ್ದೇಶಿಸಿದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರು ತಮ್ಮ ಅನುಭವವನ್ನು ಇಲ್ಲಿ ದಾಖಲಿಸಿದ್ದಾರೆ. ಲೇಖಕಿ ವೈದೇಹಿ ಅವರು  ’ಪ್ರತಿ ರಾಮಾಯಣದಲ್ಲಿಯೂ ಹೀಗೆಯೇ ಯಾಕಾಗಬೇಕು?' ಎಂಬ ಪ್ರಶ್ನೆಯನ್ನು ಎತ್ತುತ್ತಾ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಹೆಣ್ಣು ಗಂಡಿನ ಸಂಬಂಧವನ್ನು ಲೈಂಗಿಕ ನೆಲೆಯಿಂದ ನೋಡುವ ರಾಮ ಪಿತೃತ್ವದ ಸಂಕೇತವಾದರೆ, ಅದೇ ಸಂಬಂಧವನ್ನು ತಾಯ್ತನದ ನೆಲೆಯಿಂದ ನೋಡುವ ಸೀತೆ ಮಾತೃತ್ವದ ಸಂಕೇತವಾಗುತ್ತಾಳೆ' ಎಂಬ  ವಿನಯಾ ಒಕ್ಕುಂದ ಅವರ ಬರಹದ ಸಾಲು, ಇಡೀ ಕೃತಿಗೆ ಹೊಸದೊಂದು ಒಳನೋಟವನ್ನು ನೀಡುತ್ತದೆ.

About the Author

ಪೃಥ್ವಿರಾಜ ಕವತ್ತಾರು

ಪೃಥ್ವಿರಾಜ ಕವತ್ತಾರು- ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಹಳ್ಳಿಯಿಂದ ಬಂದವರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ.ಪದವೀಧರ, ವೃತ್ತಿಯಲ್ಲಿ ಪತ್ರಕರ್ತ. ಚಿತ್ರಪಟ ರಾಮಾಯಣ, ಮರ್ಯಾದಾ ಪುರುಷೋತ್ತಮ, ಸಂಸ್ಮರಣ ಪುಸ್ತಕಗಳ ಪ್ರಕಟಣೆ. ಸಂಪ್ರದಾಯ ಮತ್ತು ಸಮಕಾಲೀನ ಯಕ್ಷಗಾನದ ಪ್ರಯೋಗ ನಡೆಸುವ ಥಿಯೇಟರ್ ಯಕ್ಷದ ಪ್ರವರ್ತಕ. ಪ್ರಸ್ತುತ ಉಡುಪಿಯಲ್ಲಿ ವಾಸ. ...

READ MORE

Related Books