ಚೊಚ್ಚಲು (ಸಂಶೋಧನ ಲೇಖನಗಳು)

Author : ಗಂಗಪ್ಪ ಎ

Pages 148

₹ 150.00




Year of Publication: 2020
Published by: ತಾರಾ ಪ್ರಿಂಟ್ಸ್
Address: #287/F-21, ರಾಮನುಜ ರಸ್ತೆ. ಮೈಸೂರು.

Synopsys

ಲೇಖಕ ಗಂಗಪ್ಪ ಎ ಅವರ ’ಚೊಚ್ಚಲು’(ಸಂಶೋಧನ ಲೇಖನಗಳು) ಅವರ ಚೊಚ್ಚಲ ಕೃತಿ. ಕೃತಿಯಲ್ಲಿ 15 ಲೇಖನಗಳಿವೆ. ಮುನ್ನುಡಿ ಬರೆದ, ಎ. ಸುಬ್ಬಣ್ಣ ರೈ, ’ ಆಧುನಿಕ ಸಾಹಿತ್ಯವನ್ನು ಅಷ್ಟೇ ಗಂಭೀರವಾದ ಓದಿಗೆ ಒಳಪಡಿಸುವ ಗಂಗಪ್ಪ ಅವರು ಆ ಮೂಲಕ ಸಾಹಿತ್ಯ ಬದುಕಿನ ಭಾಗವಾಗಿಸಲು ಪ್ರಯತ್ನಿಸಿದ್ದಾರೆ. ಸಾಹಿತ್ಯಕ್ಕೂ ಸಿನಿಮಾಕ್ಕೂ ಅವಿನಾಭಾವ ಸಂಬಂಧವಿದೆ. ಸಿನಿಮಾದಲ್ಲಿ ಸಾಹಿತ್ಯವು ಹಲವು ರೂಪಗಳಲ್ಲಿ ಹಾಸುಹೊಕಾಗಿರುತ್ತದೆ. ಸಾಹಿತ್ಯದಲ್ಲಿನ ವಿವಿಧ ಸಂವೇದನೆಗಳು, ವಾದಗಳು, ವೈಚಾರಿಕತೆಗಳು ಸಿನಿಮಾಗಳಲ್ಲೂ ಅಭಿವ್ಯಕ್ತಗೊಂಡಿರುತ್ತವೆ. ಸಾಹಿತ್ಯ ಕೃತಿಗಳ ಶೀರ್ಷಿಕೆಗಳಂತೆ ಸಿನಿಮಾಗಳ ಶೀರ್ಷಿಕೆ ಔಚಿತ್ಯದಿಂದ ಕೂಡಿರುತ್ತವೆ. ಸಿನಿ ಪತ್ರಿಕೋದ್ಯಮವು ಇಂದು ಪತ್ರಿಕೋದ್ಯಮದ ಒಂದು ವಿಭಿನ್ನ ಶಾಖೆಯಾಗಿ ಬೆಳೆದುನಿಂತಿದೆ. ಸಿನಿಮಾದ ಈ ವಿವಿಧ ಆಯಾಮ ಗಂಗಪ್ಪ ಅವರು ಸಾಹಿತ್ಯದಷ್ಟೇ ಗಂಭೀರ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಆ ಮೂಲಕ ಸಿನಿಮಾ ಎಂಬುದು ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಅಧ್ಯಯನವನ್ನು ಅಪೇಕ್ಷಿಸುವ ಒಂದು ಮಾಧ್ಯಮವೆಂಬುದನ್ನು ತೋರಿಸಿಕೊಟ್ಟಿದ್ದಾರೆ.’ ಎಂದು ಪ್ರಶಂಸಿದ್ದಾರೆ.

 

About the Author

ಗಂಗಪ್ಪ ಎ

ಲೇಖಕ ಗಂಗಪ್ಪ ಎ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತಾಳೂರು ಗ್ರಾಮದವರು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರು. “ಕನ್ನಡ ರಂಗಭೂಮಿ ಮತ್ತು ಸಿನಿಮಾ- ಅಂತಃ ಬಂಧದ ನೆಲೆಗಳು” ವಿಷಯವಾಗಿ ಪಿಎಚ್.ಡಿ ಅಧ್ಯಯನ ಕೈಗೊಂಡಿದ್ದಾರೆ.  'ಚೊಚ್ಚಲು (ಸಂಶೋಧನಾ ಲೇಖನಗಳು) ಇವರ ಮೊದಲ ಕೃತಿ. ...

READ MORE

Related Books