ಚೋಮನ ದುಡಿ

Author : ಶಿವರಾಮ ಕಾರಂತ

Pages 128

₹ 65.00




Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455 www.sapnaonline.com

Synopsys

ಕಾರಂತರ ಕಾದಂಬರಿಗಳಲ್ಲಿಯೇ ಜನಪ್ರಿಯತೆಯ ಉತ್ತುಂಗ ಶಿಖರಕ್ಕೇರಿದ ಕೃತಿ ಚೋಮನದುಡಿ. ಕಾದಂಬರಿಯ ಮೊದಲ ಹಸ್ತಪ್ರತಿ ಹಸುವೊಂದರ ಬಾಯಿಗೆ ಆಹಾರವಾಗಿ ನಾಶವಾದದ್ದು, ವಿಚಿತ್ರವೆನಿಸಿದರೂ ವಾಸ್ತವಿಕ ವಿದ್ಯಮಾನ, ಸ್ನೇಹಿತರೊಬ್ಬರ ಮನೆಯ ಜಗುಲಿಯ ಮೇಲೆ ಕುಳಿತು ಬರೆದಿದ್ದ ಈ ಕಾದಂಬರಿಯ ಹಸ್ತಪ್ರತಿಯನ್ನು ಅಲ್ಲೇ ಬಿಟ್ಟು , ಯಾವುದೋ ಕೆಲಸಕ್ಕಾಗಿ ಮನೆಯೊಳಕ್ಕೆ ತೆರಳಬೇಕಾಗಿ ಬಂದ ಸಂದರ್ಭದಲ್ಲಿ, ಬೀದಿಯಲ್ಲಿ ಮೇಯುತ್ತಿದ್ದ ದನವೊಂದರ ಕಣ್ಣಿಗೆ ಚೋಮನದುಡಿ ಕಾದಂಬರಿಯ ಹಸ್ತಪ್ರತಿ ಹುಲ್ಲಿನಂತೆ ಕಂಡಿರಬೇಕು! ಅವರು ಮನೆಯೊಳಕ್ಕೆ ತೆರಳಿ ಹೊರಬಂದಾಗ, ಅದು ಹಸುವಿನ ಒಡಲನ್ನು ಹೊಕ್ಕಿತ್ತು! ಈ ದೃಶ್ಯದಿಂದುಂಟಾದ ಮಾನಸಿಕ ಆಘಾತದಿಂದ ಪ್ರಾಯಶಃ ಕಾರಂತರ ಆವೇಶ ಹೆಚ್ಚಿರಬೇಕು. ತಿರುಗಿ ಅವರು ಬರೆದ ಈ ಕಾದಂಬರಿ ಇಂದಿಗೂ ತನ್ನ ಆವೇಶವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಅಸ್ಪೃಶ್ಯತೆಯ ವಿರುದ್ಧ ಇಪ್ಪತ್ತರ ದಶಕದಿಂದಲೇ ನಾಟಕ, ಕವನ, ಭಾಷಣ, ಚಲಚ್ಚಿತ್ರಗಳನ್ನು ರಚಿಸುತ್ತಿದ್ದ ಕಾರಂತರು, ಕಾದಂಬರಿ ಮಾಧ್ಯಮದ ಮೂಲಕವೂ ಈ ಸಾಮಾಜಿಕ ಅನ್ಯಾಯ, ಅಸಮಾನತೆಯ ವಿರುದ್ಧ ದನಿ ಎತ್ತಿದ್ದರು. ಭಾರತದ ಜಾತಿವ್ಯವಸ್ಥೆಯು ಇನ್ನೂ ಈ ರೀತಿಯಲ್ಲಿಯೇ ಇರುವುದು ವಿಷಾದನೀಯ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Conversation

Related Books