ಸಿನಿಮಾ ಜಗತ್ತು

Author : ನಾಗೇಂದ್ರ

Pages 311

₹ 270.00




Year of Publication: 2017
Published by: ಶ್ರೀ ಚನ್ನಕೇಶವ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಡಾ. ನಾಗೇಂದ್ರ ಅವರು ಸಿನಿಮಾ ಜಗತ್ತು ಎಂಬ ಕೃತಿಯ ಶೀರ್ಷಿಕೆಯಡಿ ಸಿನಿಮಾ ನಡೆದು ಬಂದ ದಾರಿಯನ್ನು ವಿಶ್ಲೇಷಿಸಿದ್ದಾರೆ. ಸಿನಿಮಾ ಜಗತ್ತಿನ ಸ್ವರೂಪ, ಈ ಮಾಯಾಲೋಕದಲ್ಲಿಎದು ಕಾಣುವ ನಟರು, ಮಸುಕಾದ ನಟರ ಬದುಕು, ತಂತ್ರಜ್ಞಾನದ ಪರಿಣಾಮ, ಪ್ರೇಕ್ಷಕರ ಮನೋಧೋರಣೆಗಳು, ಈ ಜಗತ್ತಿನ ಥಳಕು-ಬಳುಕಿನ ಚಿತ್ರಣಗಳು ಇತ್ಯಾದಿ ಅಂಶಗಳನ್ನು ಪ್ರಸ್ತಾಪಸಿದ್ದು, ಓದುಗರ ಗಮನ ಸೆಳೆಯುತ್ತದೆ. ಸಿನಿಮಾ ಜಗತ್ತಿನ ವಿವರಗಳನ್ನು ಒಳಗೊಂಡ ಉತ್ತಮ ಆಕರ ಗ್ರಂಥವಿದು.

About the Author

ನಾಗೇಂದ್ರ

ಬರಹಗಾರರು, ಉಪನ್ಯಾಸಕರು ಆಗಿರುವ ಡಾ. ನಾಗೇಂದ್ರ ಅವರು ಪ್ರಸ್ತುತ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಸಿನಿಮಾ, ಮಾಧ್ಯ ನಿರೂಪಕರ ಧ್ವನಿ, ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು, ಮಾಧ್ಯಮ ವರದಿಗಾರಿಕೆ, ಟಿ.ವಿ ವರದಿಗಾರಿಕೆ, ಮಾಧ್ಯಮ ಲೋಕ, ದೈನಿಕ ವರದಿಗಾರಿಕೆ, ಟಿವಿ ಮಾಧ್ಯಮ, ದೃಶ್ಯ ನಿರ್ಮಾಣ, ರೇಡಿಯೋ ಧ್ವನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲಿಷ್ ಭಾಷೆ ಪುಸ್ತಕ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರು   ಹಿಸ್ಟರಿ ಆಫ್ ...

READ MORE

Related Books