ಕ್ಲಬ್‌ ಹೌಸ್ ಕತೆಗಳು

Author : ಜಿ.ಪಿ ರಾಮಣ್ಣ

Pages 190

₹ 263.00




Year of Publication: 2022
Published by: ಎಂ. ಬೈರೇಗೌಡ ಪ್ರಗತಿ ಗ್ರಾಫಿಕ್ಸ್
Address: #119, 3ನೇ ತಿರುವು, 8ನೇ ,ಮುಖ್ಯ ರಸ್ತೆ, ಹಂಪಿನಗರ ಬೆಂಗಳೂರು- 104

Synopsys

ಕ್ಲಬ್‌ ಹೌಸ್ ಕತೆಗಳು ಜಿ. ಪಿ ರಾಮಣ್ಣ ಅವರ ಸಂಪಾದಿತ ಕೃತಿಯಾಗಿದೆ. ವಿಚಾರಗಳಿಗೆ ಅಪವಾದವಾಗಿ ಕ್ಲಬ್ ಹೌಸನ್ನು ನಮ್ಮ ಕಥಾಪರಂಪರೆ ತಂಡ ಪ್ರಭಾವಶಾಲಿಯಾಗಿ ಬಳಸಿಕೊಂಡು, ದೂರದೂರದ ಹಲವರನ್ನು ಒಂದು ವೇದಿಕೆಗೆ ತರುವ ಮೂಲಕ ಇಡೀ ಜಾಲತಾಣ ಕ್ಷೇತ್ರದಲ್ಲಿಯೇ ಹೊಸದೆನ್ನಬಹುದಾದ ಸಾಹಸವೊಂದಕ್ಕೆ ತೊಡಗಿರುವುದು ಸಂತಸದ ಸುವಿಚಾರ. ಓದಿನ ಅಭಿರುಚಿ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತೀದಿನ (ಭಾನುವಾರ ಹೊರತುಪಡಿಸಿ) ಕನ್ನಡದ ಹಳೆಯ, ಹೊಸಬರ ಕತೆಯೊಂದನ್ನು ತಂದು ಕಥಾಪರಂಪರೆ ವೇದಿಕೆಯಲ್ಲಿ ಓದುವುದು, ಆ ಕತೆಯ ಹೂರಣದ ಬಗ್ಗೆ ಚರ್ಚಿಸುವುದು, ಪರಟುವುದು, ಕಾಲೆಳೆಯುವುದು, ಕಟಕಿಯಾಡುವುದು, ಹಾಗೆಯೇ ಮೆಚ್ಚುವುದು ಎಲ್ಲವೂ ಆರೋಗ್ಯಪೂರ್ಣವಾಗಿ ಜರುಗುತ್ತಿದೆ  ಎಂದು ಜಿ.ಪಿ ರಾಮಣ್ಣ ಕ್ಲಬ್‌ ಹೌಸ್ ಕತೆಗಳು ಪುಸ್ತಕದ ಬಗ್ಗೆ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಜಿ.ಪಿ ರಾಮಣ್ಣ
(20 December 1959)

ಜಿ.ಪಿ ರಾಮಣ್ಣ ಮೂಲತಃ ಬೆಂಗಳೂರಿನವರು. ತಂದೆ ಜಿ. ಪಾಪಣ್ಣ ತಾಯಿ ಚೆನ್ನಮ್ಮ ಪ್ರಾಥಮಿಕ ಶಿಕ್ಷಣ ಬೆಂಗಳೂರಿನ ಮಡಿವಾಳದಲ್ಲಿ ಹಾಗೂ ಫ್ರೌಡ ಶಿಕ್ಷಣವನ್ನು ಹೊಂಬೇಗೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ಪದವಿ ವಿದ್ಯಾಭ್ಯಾಸವನ್ನು ಬೆಂಗಳೂರಿನ ವಿಜಯ ಸಂಜೆ ಕಾಲೇಜಿನಲ್ಲಿ ಪೂರೈಸಿ ನಂತರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ಹಾಗೂ ಆಡಳಿತಾಧಿಕಾರಿ ಕಾರ್ಯನಿರ್ವಹಿಸಿದರು. ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಜಿ.ಪಿ. ರಾಮಣ್ಣ, ತಮ್ಮ ಅನನ್ಯ ಪ್ರತಿಭೆಯಿಂದ ಸಾಂಸ್ಕೃತಿಕ ಕ್ಷೇತ್ರದ ಸಿರಿವಂತಿಕೆಯನ್ನು ಹೆಚ್ಚಿಸಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ...

READ MORE

Related Books