ಕಾಕ್ ಟೇಲ್

Author : ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

Pages 160

₹ 150.00
Year of Publication: 2021
Published by: ಸಾವಣ್ಣ ಎಂಟರ್ ಪ್ರೈಸೆಸ್
Address: # 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಅಡ್ಡರಸ್ತೆ ಪೂರ್ವ, ಬೆಂಗಳೂರು-560011
Phone: 9036312786

Synopsys

ಲೇಖಕಿ ಚೇತನಾ ತೀರ್ಥಹಳ್ಳಿ (ಎಚ್.ಎನ್. ಗಾಯತ್ರಿ) ಅವರ ಕೃತಿ-ಕಾಕ್ ಟೇಲ್. ತಮ್ಮ ಈ ಕೃತಿಯ ಕುರಿತು ಲೇಖಕಿ ‘ ಒಂದು ಓದು ಮತ್ತೊಂದು ಓದಿನ ಕುತೂಹಲಕ್ಕೆ ಹಚ್ಚುವಂತಿರಬೇಕು. ಒಂದು ಬರಹ ಮತ್ತೊಂದು ಬರಹವನ್ನು ಬರೆಸುವಂತಿರಬೇಕು. ಒಂದು ಚಿಂತನೆ ಮತ್ತೊಂದು ಚಿಂತನೆಗೆ ದಾರಿಯಾಗಬೇಕು. ಇದು ನನ್ನ ನಂಬಿಕೆ. ಮತ್ತು ನನ್ನ ಓದು, ನನ್ನ ಬರಹಗಳು, ನನ್ನ ಚಿಂತನೆ ಕೂಡಾ ಹುಟ್ಟಿಕೊಂಡಿದ್ದು ಹೀಗೇ. ನಾನು ಹೇಗೆ ಪ್ರೇರಣೆ ಪಡೆದು ಭಿನ್ನ ಭಿನ್ನ ರುಚಿಯ ಓದಿಗೆ ಹಚ್ಚಿಕೊಂಡೆನೋ ಹಾಗೇ ಮತ್ತೊಬ್ಬರಿಗೂ ಅಂಥದೇ ರುಚಿ ಹತ್ತಿಸುವ ಚಿಕ್ಕ ಆಸೆಯಿಂದ ಈ ಪುಸ್ತಕ ಸಿದ್ಧ ಮಾಡಿದ್ದೇನೆ. ಇಲ್ಲಿನ ಕಥೆಗಳಲ್ಲಿ ಕೆಲವು ಯಾವ ಯಾವಾಗಲೋ  ಎಲ್ಲೆಲ್ಲೋ ಓದಿದ್ದು, ಕೇಳಿದ್ದು. ಅವನ್ನು ಒಂದು ಎಳೆಯಲ್ಲಿ ನನ್ನ ಬರಹ ಶೈಲಿಯಲ್ಲಿ ಪೋಣಿಸಿದ್ದೇನಷ್ಟೆ. ಕೆಲವಕ್ಕೆ ನನ್ನ ಗ್ರಹಿಕೆಯ ಟಿಪ್ಪಣಿಗಳೂ ಇವೆ. ಮತ್ತೆ ಕೆಲವು ನನ್ನ ಕಲಿಕೆಯ ಹಂತದಲ್ಲಿ ಮೂಡಿದ ತೊದಲು ಚಿಂತನೆಗಳು. ಇದು  ಹೀಗಿರಬಹುದೇ ಅನ್ನುವ ಅಚ್ಚರಿಯೊಂದಿಗೆ, ಹುಡುಕಾಟದಲ್ಲಿ ಬರೆದಂಥವು. 
ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝೆನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ “ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ” ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ. 

ಎಲ್ಲ ಯಾಕೆ ಗುಡ್ಡೆ ಹಾಕಿ ಚಿತ್ರಾನ್ನ ಮಾಡಿದ್ದಾರೆ, ಒಂದೋ ಕಥೆಗಳು, ಒಂದೋ ಲೇಖನಗಳು ಹೀಗೆ ಮಾಡಬಹುದಿತ್ತಲ್ಲ ಅಂತ ಯಾರಾದರೂ ಕೇಳಬಹುದು. ಕಾರಣ ಇಷ್ಟೇ, ‘ಲೋಕೋ ಭಿನ್ನ ರುಚಿಃ’. ಎಲ್ಲರ ಓದಿನ ರುಚಿ ಮತ್ತು ಆಸಕ್ತಿಯೂ ಒಂದೇ ಥರ ಇರುವುದಿಲ್ಲ. ಒಂದೇ ವಿಷಯವನ್ನು ಕಥೆಯ ರೂಪದಲ್ಲೂ ಹೇಳಬಹುದು, ಪ್ರಬಂಧವಾಗಿಯೂ, ಲೇಖನವಾಗಿಯೂ. ಈ ಪುಸ್ತಕದ ಒಟ್ಟಾರೆ ಆಶಯ ಒಂದೇ, ಅದನ್ನು ಹೇಳಲು ಬಳಸಿದ ಬಗೆ ಬೇರೆ ಬೇರೆ ಅಷ್ಟೇ. ಆದ್ದರಿಂದಲೇ ಇದು ಹಲವು ಮಿಶ್ರಣಗಳ ಕಾಕ್ ಟೇಲ್’ ಎಂದು ಹೇಳಿಕೊಂಡಿದ್ದಾರೆ.

 

 

About the Author

ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...

READ MORE

Related Books