ಕಾಮಿಡಿ

Author : ಜಿ.ಎಸ್. ಆಮೂರ

Pages 104

₹ 7.00




Year of Publication: 1993
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು - 560002

Synopsys

ಕನ್ನಡದ ವಿವಿಧ ಲೇಖಕರ ಸಹಕಾರದಿಂದ, ಸಿದ್ದವಾದ ’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಪುಸ್ತಕಗಳು ಸಾಹಿತಿ ಡಾ, ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ಸಾಹಿತ್ಯ ಚಿಂತನೆ ಮತ್ತು ವಿಮರ್ಶೆಗಳ ಹಿನ್ನೆಲೆಯಲ್ಲಿ ಪ್ರಕಟವಾದ ಅನೇಕ ಪುಸ್ತಕಗಳಲ್ಲಿ ಲೇಖಕ, ವಿಮರ್ಶಕರಾದ ಡಾ, ಜಿ,ಎಸ್.ಆಮೂರ ’ ಕಾಮಿಡಿ’ ಪುಸ್ತಕವೂ ಪ್ರಮುಖವಾದದ್ದು.

’ಕಾಮಿಡಿ’ ಪದಕ್ಕೆ ಪರ್ಯಾಯವಾಗಿ ’ಪ್ರಹಸನ’ ಹಾಗೂ ’ಹರ್ಷನಾಟಕ’ ಗಳೆಂಬ ಎರಡು ಪದಗಳ ಬಳಕೆ ಕನ್ನಡದಲ್ಲಿದೆ. ಈ ಕೃತಿ ಮುಖ್ಯವಾಗಿ ಭಾರತೀಯ ಮತ್ತು ಪಾಶ್ಚಾತ್ಯ ಸಂದರ್ಭಗಳಲ್ಲಿ ಕಂಡು ಬಂದ ಕಾಮಿಡಿಯ ಸೈದ್ಧಾಂತಿಕ ಸ್ವರೂಪವನ್ನೂ, ಪಾಶ್ಚಾತ್ಯ ಪರಿಪ್ರೇಕ್ಷ್ಯದಲ್ಲಿ ಕಾಮಿಡಿ ಬೆಳೆದು ಬಂದ ರೀತಿಯನ್ನೂ, ಕಾಮಿಡಿ ಮತ್ತು ಕನ್ನಡ ನಾಟಕಗಳ ಸಂಬಂಧವನ್ನೂ  ವಿವರವಾಗಿ ತಿಳಿಸುತ್ತದೆ. 

ಕಾಮಿಡಿ ಮತ್ತು ಉಳಿದ ಸಾಹಿತ್ಯ ಪ್ರಕಾರಗಳ ಪರಿಚಯವನ್ನು ಕುರಿತು ಚರ್ಚಿಸುವ ’ಕಾಮಿಡಿ’ ಕೃತಿ  ಸಂಸ್ಕೃತ ಸಾಹಿತ್ಯದಲ್ಲಿನ ಹಾಸ್ಯ ನಾಟಕ ರಚನೆಗಳ ಬಗ್ಗೆ ಪ್ರಸ್ತಾಪಿಸುತ್ತದೆ.  ಇದರ ಹಿನ್ನೆಲೆಯಾಗಿಟ್ಟುಕೊಂಡು  ಸಂಸ್ಕೃತ ನಾಟ್ಯ ಪರಂಪರೆಯನ್ನು ಕಾಮಿಡಿ ಪರಂಪರೆಯನ್ನಾಗಿ ಗಮನಿಸುವ ಅನೇಕ ಉದಾಹರಣೆಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books