ಕಮ್ಯೂನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು

Author : ವಿ.ಎಸ್.ಎಸ್. ಶಾಸ್ತ್ರಿ

Pages 108

₹ 63.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು-ವಿವಿಧ ಲೇಖಕರು ಬರೆದ ಲೇಖನಗಳನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಅನುವಾದಿಸಿದ್ದೇ ಈ ಕೃತಿ. ವಿಚಾರವಾದಿ-ಚಿಂತಕ ಸ್ವಾಮಿ ವಿವೇಕಾನಂದರು ಜಡ್ಡುಗಟ್ಟಿದ ಸಂಪ್ರದಾಯವನ್ನು ವಿರೋಧಿಸಿದರು. ಧರ್ಮ-ದೇವರು ಹೆಸರಿನಲ್ಲಿ ನಡೆಯುವ ಎಲ್ಲ ಶೋಷಣೆಗಳನ್ನು ವಿರೋಧಿಸಿದರು. ಆದರೂ, ಪುರೋಹಿತಶಾಹಿ ಮಾತ್ರ ಇವರ ಇಂತಹ ವಿಚಾರಗಳನ್ನು ಮುಚ್ಚಿಟ್ಟು, ಹಿಂದೂ ಎಂಬ ಕಾರಣಕ್ಕೆ ಕೋಮು ಸಂಘರ್ಷವನ್ನು ಪ್ರಚೋದಿಸುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದ ವಿವೇಕಾನಂದರ ಬಗ್ಗೆ ಹೇಳದೇ ಕೇವಲ ಹಿಂದೂ ಸಂಸ್ಕೃತಿ ಎಂದೇ ಬಿಂಬಿಸಲಾಗುತ್ತಿದೆ. ಇಂತಹ ಕೊಳಕು ಮನಸ್ಸಿನ ವರ್ಗದ ವಿರುದ್ಧ ಹತ್ತು ಹಲವು ಲೇಖನಗಳು ತಮ್ಮ ವಿಚಾರವನ್ನು ಪ್ರತಿಪಾದಿಸಿವೆ. ಮುಖ್ಯವಾಗಿ ಕಮ್ಯುನಿಸ್ಟ್ ದೃಷ್ಟಿಕೋನದಿಂದ - ವಿಮರ್ಶೆ ಮಾಡಲಾಗಿದೆ. ಈ ಎಲ್ಲ ಲೇಖನಗಳು ಇಂಗ್ಲಿಷ್ ನಲ್ಲಿದ್ದು, ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ವಿ.ಎಸ್.ಎಸ್. ಶಾಸ್ತ್ರಿ

ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು.  ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ.  ...

READ MORE

Reviews

(ಕಮ್ಯೂನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು, ಹೊಸತು 2014, ಜನವರಿ)

ವಿಶ್ವಮಾನವ – ವೀರಸನ್ಯಾಸಿ – ವಿಶ್ವವಿಜೇತ ಮುಂತಾಗಿ ಜನರಿಂದ ಪ್ರಶಂಸೆ ಪಡೆದ ಸ್ವಾಮಿ ವಿವೇಶಾನಂದರದು ಆಧ್ಯಾತ್ಮ ಚಿಂತನೆ. ಜೊತೆಗೆ ಪ್ರಖರ ವಿಚಾರವಾದಿ ಹಾಗೂ ಪ್ರಗತಿಪರ ಮನೋಭಾವ ಹೊಂದಿದ್ದರು, ಇವರ ಸಂದೇಶಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟವು, ಅವರ ಕಾಲದ ಭಾರತ ಆಂಗ್ಲರ ಆಳ್ವಿಕೆಯಲ್ಲಿ ನಲುಗಿತ್ತು. ಜೊತೆಗೆ ದೇಶೀಯ ಅನಿಷ್ಟಗಳಾದ ಮೂಢನಂಬಿಕೆ – ಜಾತಿಪದ್ಧತಿ ವಿಜೃಂಭಿಸಿತ್ತು. ಅನಕ್ಷರಸ್ಥರೂ ಬಡವರೂ ಆದ ಕೆಳವರ್ಗ ದವರನ್ನು ದಮನಿಸಿ ತಾವೇ ಶ್ರೇಷ್ಠರೆಂದು ಬೀಗುವ ಪುರೋಹಿತರಾಹಿಯನ್ನಂತೂ ತಮ್ಮ ಕಟುಮಾತುಗಳಿಂದ ನಿಂದಿಸಿ ಮುಂದೆ ಶೂದ್ರ ಜನಾಂಗವೇ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆಂದು ಖಂಡಿತವಾಗಿ ಮುನ್ನೋಟ ನೀಡಿದ್ದರು. ಯುವಜನತೆ ಎಚ್ಚೆತ್ತುಕೊಳ್ಳಬೇಕೆಂದು, ಭವ್ಯಭಾರತದ ರೂವಾರಿಗಳಾಗಬೇಕೆಂದು ಅವರು ಕರೆ ನೀಡಿದ್ದರು. ಇತ್ತೀಚೆಗೆ ವಿವೇಕಾನಂದರನ್ನು ತಮ್ಮವರೆಂದು ಬಿಂಬಿಸಿ, ತನ್ಮೂಲಕ ಜನರನ್ನು ನಂಬಿಸಿ, ನಮ್ಮ ಸಿದ್ಧಾಂತಗಳೇ ಅವರವೂ ಆಗಿದ್ದವೆಂದು ಹಸೀ ಸುಳ್ಳನ್ನು ಭಾರತೀಯ ಜನತಾ ಪಕ್ಷ, ಸಂಘಪರಿವಾರದಂತಹ ಕೋಮುವಾದಿಗಳು ಹೇಳಿಕೊಳ್ಳು ವುದರ ಹಿನ್ನೆಲೆಯಲ್ಲಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಇಲ್ಲಿ ಭಾರತದ ಎಡಪಕ್ಷಗಳ ನಾಯಕರಿಗೆ ವಿವೇಕಾನಂದ ಅವರ ವ್ಯಕ್ತಿತ್ವ ಹೇಗೆ ಕಂಡಿದೆಯೆಂದು – ಮುಖ್ಯವಾಗಿ ಮಾರ್ಕ್ಸವಾದಿ ದೃಷ್ಟಿಕೋನದಿಂದ ವಿಮರ್ಶೆ ಮಾಡಲಾಗಿದೆ. ವಿವೇಕಾನಂದರು ಹಿಂದೂವಾದಿಗಳೆಂದು ಬಿಂಬಿಸುವ ಹುನ್ನಾರವನ್ನು ಕಟುಮಾತುಗಳಲ್ಲಿ ಖಂಡಿಸಲಾಗಿದೆ.

Related Books