ಕೊರೊನಾ ಜಾನಪದ

Author : ಅರುಣ್ ಜೋಳದಕೂಡ್ಲಿಗಿ

Pages 204

₹ 180.00




Year of Publication: 2020
Published by: ಪ್ರಗತಿ ಪ್ರಕಾಶನ
Address: ಮೇಲ್ಮಹಡಿ, ನಂ:2406/2407/K-1, ಮೊದಲ ಕ್ರಾಸ್, ಹೊಸ ಬಂಡೀಕೇರಿ, ಕೆ.ಆರ್.ಮೊಹಲ್ಲಾ, ಮೈಸೂರು-570004
Phone: 0821-428755

Synopsys

‘ಕೊರೊನಾ ಜಾನಪದ’ ಅರುಣ್ ಜೋಳದಕೂಡ್ಲಿಗಿ ಅವರು ಬದಲಾಗುತ್ತಿರುವ ನವಜಾನಪದ ಕುರಿತ ಸಂಶೋಧನ ಲೇಖನಗಳ ಕೃತಿ.  ಜಾನಪದ ಅಧ್ಯಯನದ ಆಸಕ್ತಿಯಿಂದ ಪ್ರಕಟಿಸುತ್ತಿರುವ ನಾಲ್ಕನೆ ಪುಸ್ತಕವಿದು. ಜಾನಪದ ಅಧ್ಯಯನದ ವಿದ್ಯಾರ್ಥಿಯಾಗಿ ಕೊರೊನಾ ಸಂದರ್ಭದಲ್ಲಿ ಹುಟ್ಟಿದ ನವ ಜಾನಪದದ ಕುರಿತ ಪ್ರತಿಕ್ರಿಯೆಯಾಗಿದೆ. ಕೊರೊನಾ ಜಾನಪದ ಲೇಖನವನ್ನು ಒಳಗೊಂಡಂತೆ ಜಾನಪದದ ಹೊಸ ಚಲನೆಗಳಿರುವ ಒಟ್ಟು 29 ಲೇಖನಗಳಿದ್ದು, ಇವುಗಳಲ್ಲಿ ಅವಧಿ ಮ್ಯಾಗ್ ಗೆ ಬರೆದ 'ಸದರ' ಕಾಲಂ ಬರಹಗಳು ಹೆಚ್ಚಿವೆ.  ಈ ಕೃತಿಗೆ ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಬೆನ್ನುಡಿ ಬರೆದಿದ್ದಾರೆ. ಕನ್ನಡ ಜಾನಪದವನ್ನು ಜನರ ಚೌಕಟ್ಟಿನ ಮೂಲಕ ವಿಶ್ಲೇಷಿಸುವ ಲೇಖನಗಳಿವೆ. ಜಾನಪದ ಎಂಬುದು ಕೇವಲ ಒಂದು ವಾದ, ಅಧ್ಯಯನದ ವಿಷಯವಲ್ಲ. ಬದಲು, ಜನಪರ ಸಮಾಜವನ್ನು ಕಟ್ಟಲು ಬೇಕಾದ ಒಂದು ಪ್ರಬಲ ಅಸ್ತ್ರವೂ ಹೌದು. ಹಾಗಾಗಿ, ಅವರು ಜಾನಪದವೇ ಇರಲಿ, ವಿಶ್ಲೇಷಣೆಯೇ ಇರಲಿ, ತಮ್ಮ ಬಗೆ ಬಗೆಯ ಹೋರಾಟಗಳ ಭಾಗವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ತಮ್ಮ ಅಧ್ಯಯನಗಳ ಮೂಲಕ ನಿಷ್ಪನ್ನಗಳ ಹೊಸ ಜ್ಞಾನದ ಮೂಲಕ ಎಲ್ಲ ಬಗೆಯ ಜನವಿರೋಧಿ ಶಕ್ತಿಗಳನ್ನು ನಿರಾಕರಿಸುವ ಅವರ ಸಂಶೋಧನೆಯ ವಿಧಾನ ತೀರಾ ಹೊಸತು ಮತ್ತು ಈ ಕಾಲಕ್ಕೆ ಪ್ರಸ್ತುತ’ ಎಂದು ಪ್ರಶಂಸಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ತಾವು ಕಂಡು ಕೊಂಡ ಘಟನೆ-ಸನ್ನಿವೇಶಗಳ ದಾರುಣತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ಕೃತಿ ಇದು.

About the Author

ಅರುಣ್ ಜೋಳದಕೂಡ್ಲಿಗಿ
(13 February 1980)

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ...

READ MORE

Related Books