ಕೌನ್ಸೆಲಿಂಗ್ ಸೀಕ್ರೆಟ್ಸ್

Author : ಬಿ.ವಿ. ಪಟ್ಟಾಭಿರಾಮ್

Pages 224

₹ 125.00




Year of Publication: 2012
Published by: ವಾಸನ್ ಪಬ್ಲಿಕೇಷನ್ಸ್
Address: : # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳುರು-560053
Phone: 0804853 5855

Synopsys

ತೆಲುಗು ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಆಪ್ತಸಮಾಲೋಚನಗಳು ಕುರಿತು ಬರೆದ ಪ್ರೇರಣಾತ್ಮಕ ಬರಹಗಳ ಸಂಕಲನ-ಕೌನ್ಸೆಲಿಂಗ್ ಸೀಕ್ರೆಟ್ಸ್. ಲೇಖಕಿ ರಮಾ ಶ್ರೀನಿಧಿ ಅವರು ತೆಲುಗುನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಒತ್ತಡದ ಜಗತ್ತಿನಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ತುಂಬ ಪ್ರಾಮುಖ್ಯತೆ ಪಡೆದಿದೆ. ಮನೆಯೊಳಗೆ, ಹೊರಗೆ, ಕೆಲಸದಲ್ಲಿ, ಸಂಸಾರದಲ್ಲಿ ಎಲ್ಲೆಲ್ಲೂ ಕೌನ್ಸೆಲಿಂಗ್ ಬೇಕೇಬೇಕು. ಹಿಂದೆ ಈ ಕೆಲಸವನ್ನು ಅಜ್ಜಂದಿರು ಅಥವಾ ಮನೆಯಲ್ಲಿದ್ದ ಇತರ ಹಿರಿಯರು ಮಾಡುತ್ತಿದ್ದರು. ಈಗ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಚಿಕ್ಕ ಕುಟುಂಬಗಳಲ್ಲಿ ಕೌನ್ಸೆಲಿಂಗ್ ಮಾಡುವವರೂ ಕಡಿಮೆ. ಹಾಗಾಗಿ ಈ ಪುಸ್ತಕ ಮಹತ್ವ ಪಡೆಯುತ್ತದೆ. ಈ ಕೃತಿಯಲ್ಲಿ, ಆರು ಅಧ್ಯಾಯಗಳಿವೆ. ಕೌನ್ಸೆಲಿಂಗ್‌ನ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿಲಾಗಿದೆ. ಲೇಖಕರು ನೋಡಿದ, ಓದಿದ, ಕೇಳಿದ ಪ್ರಕರಣಗಳನ್ನು ವಿವರಿಸಿದ್ದಾರೆ. ಆದರೆ, ಪಾತ್ರಗಳು, ಸನ್ನಿವೇಶಗಳು ಎಲ್ಲವೂ ಕಾಲ್ಪನಿಕ. ಹೊಸದಾಗಿ ಮನಃಶಾಸ್ತ್ರ ಅಧ್ಯಯನ ಮಾಡಲು ಬಂದವರಿಗೆ ಉಪಯುಕ್ತ ವಾಗಬಹುದು. ಮನೋವಿಜ್ಞಾನದಲ್ಲಿ ಆಸಕ್ತಿಯುಳ್ಳವರು ಓದಲೇಬೇಕಾದ ಪುಸ್ತಕವಿದು.

About the Author

ಬಿ.ವಿ. ಪಟ್ಟಾಭಿರಾಮ್

ಲೇಖಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ವೃತ್ತಿಯಿಂದ ಮನೋವೈದ್ಯರು. ತೆಲಂಗಾಣದ ಹೈದ್ರಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಎದುರಿಸುವಂತಹ ಪ್ರೇರಣಾತ್ಮಕ ಬರಹಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪ್ರಶಾಂತಿ ಕಣನ್ಸಿಲಿಂಗ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಸೇವೆ ಮಾಡುತ್ತಿದ್ದಾರೆ. ಕೃತಿಗಳು: ಪಾಠ ಹೇಳುವುದೂ ಒಂದು ಕಲೆ, ಸೂತ್ರಧಾರರು, ಕಷ್ಟಪಟ್ಟು ಕೆಲಸ ಮಾಡಬೇಡಿ; ಇಷ್ಟಪಟ್ಟು ಕೆಲಸ ಮಾಡಿ, ಟರ್ನಿಂಗ್ ಪಾಯಿಂಟ್, ಸರ್ಕಾರವೇ ಮಾತನಾಡು, ಗುಡ್ ಸ್ಟೂಡೆಂಟ್, ಜೀನಿಯಸ್ ನೀವೂ ಸಹ, ಲೀಡರ್‍ ಷಿಪ್, ಪಾಜಿಟೀವ್ ಥಿಂಕಿಂಗ್, ಕೌನ್ಸೆಲಿಂಗ್ ಸೀಕ್ರೆಟ್ಸ್, ಗೆಲುವು ನಿಮ್ಮದೇ, ...

READ MORE

Related Books