ಡಿ. ಗೋವಿಂದಾಸ್ ಸಮಗ್ರ ಸಾಹಿತ್ಯ

Author : ಎಂ.ಎಸ್. ಶೇಖರ್

Pages 216

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಡಿ. ಗೋವಿಂದದಾಸ್ ಅವರು ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ, ನಾಟಕಕಾರ ಹಾಗೂ ಅಪ್ಪಟ ಗಾಂಧೀವಾದಿಗಳಾಗಿದ್ದು ಗಾಂಧೀವಾದದ ಹಿನ್ನೆಲೆಯಲ್ಲಿ ಸಾಮಾಜಿಕ ಆಂದೋಲನದ ಎಲ್ಲ ನೆಲೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರ ಕಾವ್ಯವು ನವೋದಯ ಕಾವ್ಯದ ಲಕ್ಷಣಗಳನ್ನು ಇಟ್ಟುಕೊಂಡು ದಲಿತ ಸಂವೇದನೆಯನ್ನು ಒಳಗೊಂಡಿರು ವಂತಹದ್ದು. ಗೋವಿಂದದಾಸರು ಕನ್ನಡ ಭಾಷೆಯನ್ನು ಒಂದು ನಿರ್ದಿಷ್ಟವಾದ ಸಾಮಾಜಿಕ ಚಳವಳಿಯ ಭಾಗವಾಗಿ ಬಳಸಿಕೊಂಡಿರುವುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ಹರಿಜನಾಭ್ಯುದಯ ಕೈ' , ಆತ್ಮಕಥನ : ನನ್ನ ಆತ್ಮಚರಿತ್ರೆ , ನಾಯಕ : ನಡುನೀರ ಹಡಗು , ಜೀವನ ಚರಿತ್ರೆ : ಕಲಿಯುಗ ಮನು ಡಾ. ಅಂಬೇಡ್ಕರ್

About the Author

ಎಂ.ಎಸ್. ಶೇಖರ್

ಸಂಶೋಧಕ, ಕವಿ, ಬರಹಗಾರ ಡಾ.ಎಂ.ಎಸ್.ಶೇಖರ್ ಅವರು 1964 ರಲ್ಲಿ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮಲ್ಲಿಗೆವಾಳು ಗ್ರಾಮದಲ್ಲಿ ಜನಿಸಿದರು. ತಂದೆ ಸಿದ್ದಯ್ಯ, ತಾಯಿ ದೇವಮ್ಮ. ಆಲೂರು, ಹಾಸನದಲ್ಲಿ ಪ್ರಾಥಮಿಕದಿಂದ ಪದವಿವರೆಗೂ ಶಿಕ್ಷಣ ಪೂರೈಸಿದರು.  ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವೀಧರರಾದರು. 1992 ರಲ್ಲಿ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾದರು. 1994 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪಡೆದರು. ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ (2010 ರಿಂದ 2012) ನಂತರ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 1997 ರಲ್ಲಿ ...

READ MORE

Related Books