ದಲಿತ ಸಾಹಿತ್ಯಾವಲೋಕನ

Author : ಶರಣಪ್ಪ ಚಲವಾದಿ

Pages 112

₹ 120.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್ ತಾಲೂಕು ಕಮಲಾಪುರ, ಜಿಲ್ಲೆ ಕಲಬುರಗಿ

Synopsys

ಡಾ. ಶರಣಪ್ಪ ಚಲವಾದಿ ಅವರು ಕಾಲಕಾಲಕ್ಕೆ ಬರೆದ ಸಂಶೋಧನಾತ್ಮಕ ಬರಹಗಳ ಸಂಗ್ರಹ-ದಲಿತ ಸಾಹಿತ್ಯಾವಲೋಕನ. ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಒಟ್ಟು 11 ಲೇಖನಗಳಿವೆ. ಸಾಹಿತಿ ಡಾ. ಗವಿಸಿದ್ಧಪ್ಪ ಎಚ್. ಪಾಟೀಲ ಅವರು ಕೃತಿಗೆ ಬೆನ್ನುಡಿ ಬರೆದು ‘ವೈಚಾರಿಕತೆಯ ಲೇಖನಗಳನ್ನು ಪ್ರಕಟಿಸಿ, ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ, ಲೇಖಕರು ಈಗ ಆ ಬರಹಗಳನ್ನು ‘ದಲಿತ ಸಾಹಿತ್ಯಾವಲೋಕನ’ ಕೃತಿ ಮೂಲಕ ಪ್ರಕಟಿಸಿದ್ದಾರೆ. ಇಲ್ಲಿಯ ಪ್ರತಿ ಲೇಖನವೂ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಗುಣಗಳನ್ನು ಹೊಂದಿವೆ. ಈ ಕೃತಿಯು ಸಾಹಿತ್ಯ ಹಾಗೂ ವೈಚಾರಿಕ ವಲಯಕ್ಕೆ ಹೊಸ ಸೇರ್ಪಡೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶರಣಪ್ಪ ಚಲವಾದಿ

ಲೇಖಕ ಡಾ. ಶರಣಪ್ಪ ಚಲವಾದಿ ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಪಿಎಚ್ ಡಿ ಪದವೀಧರರು ಹಾಗೂ  ಬಿ.ಇಡಿ ಪದವೀಧರರು. ಇದೇ ವಿ.ವಿ.ಯ ರಾಯಚೂರು ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿದ್ದಾರೆ. ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯ ಎಂಬುದು ಸಂಶೋಧನಾ ಮಹಾಪ್ರಬಂಧ. ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.  ಹಲವಾರು ಲೇಖನಗಳು ಪ್ರಕಟವಾಗಿವೆ.  ಕೃತಿಗಳು: ಬುದ್ಧ ಭೂಮಿ (ಕವನ ಸಂಕಲನ), ದಲಿತ ಸಾಹಿತ್ಯಾವಲೋಕನ (ಸಂಶೋಧನಾ ಲೇಖನಗಳ ಸಂಗ್ರಹ) ಪ್ರಶಸ್ತಿಗಳು: ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ...

READ MORE

Related Books