ದಲಿತ ಸಾಹಿತ್ಯ ಚಿಂತನ

Author : ಶೋಭಾ ನಾಯಕ

Pages 142

₹ 75.00




Year of Publication: 2012
Published by: ಸಾಧನ ಪಬ್ಲಿಕೇಷನ್ಸ್
Address: ನಂ, 15/16, ಮೊದಲನೆ ಮಹಡಿ, ಶಿವ ಕಾಂಪ್ಲೆಕ್ಸ್, ಬಳೆಪೇಟೆ ಸರ್ಕ್‌ಲ್, ಬೆಂಗಳೂರು - 560053
Phone: 9480088960

Synopsys

ಲೇಖಕಿ ಶೋಭಾ ನಾಯಕ ಅವರ ಲೇಖನಗಳ ಕೃತಿ ‘ದಲಿತ ಸಾಹಿತ್ಯ ಚಿಂತನ’. ದಲಿತ ಸಾಹಿತ್ಯದ ಬಗ್ಗೆ ಅಲ್ಲಲ್ಲಿ ಪ್ರಕಟವಾದ ಲೇಖನಗಳನ್ನು ಸಂಗ್ರಹಿಸಿ ಅವುಗಳಿಗೆ ಒಂದು ಆಂಥಾಲಜಿಯ ರೂಪವನ್ನು ನೀಡಿದ್ದಾರೆ.ಇಲ್ಲಿ ಸಂಗ್ರಹಿತಗೊಂಡಿರುವ ಲೇಖನಗಳು ಒಂದು ಕಾಲಘಟ್ಟದಲ್ಲಿ ಬರೆದವುಗಳು. ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಈ ಲೇಖನಗಳನ್ನು ಸಂಕಲಿಸಲಾಗಿದೆ. ಈ ಮೂಲಕ ಅಲ್ಲಲ್ಲಿ ಚದುರಿಹೋಗಿದ್ದ ಮೌಲ್ಯಯುತವಾಗಿರುವ ಈ ಲೇಖನಗಳು ಪುಸ್ತಕ ರೂಪದಲ್ಲಿ ಲಭ್ಯವಾಗಿಸುವುದು ಇವರ ಉದ್ದೇಶ ಎಂದು ಲೇಖಕಿಯು ಸ್ಪಷ್ಟಪಡಿಸಿದ್ದಾರೆ. 

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books