ದಶಭಕ್ತಿಃ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 242

₹ 185.00




Year of Publication: 2008
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಶ್ರೀಕುಂದಕುಂದ-ಪೂಜ್ಯಪಾದ ಕೃತ ದಶಭಕ್ತಿಃ ಕೃತಿಯನ್ನು ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಸಂಪಾದಿಸಿದ್ದಾರೆ. ಜೈನರ ನಿತ್ಯಕ್ರಿಯಾಪಾಠಗಳಲ್ಲಿ ದಶಭಕ್ತಿ ಪಂಚಸ್ತೋತ್ರಗಳು ಬಹುಮುಖ್ಯವಾಗಿರುತ್ತವೆ. ಈ ಮುಖ್ಯತೆಗೆ ಅವುಗಳಲ್ಲಿ ಪ್ರತಿಪಾದಿಸಲ್ಪಟ್ಟ ವಿಷಯಗಳ ಪವಿತ್ರತೆಯೂ ಪ್ರಧಾನತೆಯೂ ಕಾರಣಗಳಾಗಿರುತ್ತವೆ. ಜೈನಧಾರ್ಮಿಕ ಜನರು ಈ ಭಕ್ತಿ ಸ್ತೋತ್ರಗಳನ್ನು ಬಹುಶ್ರದ್ಧೆಯಿಂದಲೂ ಭಕ್ತಿಯಿಂದಲೂ ಪಠನ ಮಾಡುವ ಪರಿಪಾಟಿಯು ಬಹುಕಾಲದಿಂದ ಬಂದಿದೆ. ಪ್ರತಿಯೊಂದು ಧಾರ್ಮಿಕ ಕ್ರಿಯೆಗಳಲ್ಲಿ ಈ ಭಕ್ತಿಗಳಲ್ಲಿ ಆಯಾ ಸಂದರ್ಭೋಚಿತವಾದ ಭಕ್ತಿಗಳನ್ನು ಹೇಳಬೇಕೆನ್ನುವ ವಿಧಿಯಿರುವುದು. ದೇವಾಲಯಕ್ಕೆ ಹೋಗಿ ದೇವ ದರ್ಶನವನ್ನು ಮಾಡುವಲ್ಲಿಯೂ ನಿತ್ಯಸಂಧ್ಯಾನುಷ್ಠಾನಾನಂತರದಲ್ಲಿಯೂ ಈಗಲೂ ಯಥಾನುಕೂಲವಾಗಿ ಅನೇಕ ಜೈನಬಂಧುಗಳು ಈ ಭಕ್ತಿ ಸ್ತೋತ್ರಗಳನ್ನು ಪಠಿಸುವುದುಂಟು. ಅಂದಮೇಲೆ ಇವುಗಳ ಪವಿತ್ರತ್ವವನ್ನೂ ಮಹತ್ವ್ತವನ್ನೂ ಬೇರೆ ಹೇಳಬೇಕಾದುದಿಲ್ಲವು. ಅಂತಹ ಪಠಣಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದಾಗಿದೆ. ಇಲ್ಲಿ ಪಂಚಮಂತ್ರಃ, ಸಂಸ್ಕೃತ ಸಿದ್ಧಭಕ್ತಿಃ, ಪ್ರಾಕೃತ ಸಿದ್ಧಭಕ್ತಿಃ, ಸಂಸ್ಕೃತ ಶ್ರುತಭಕ್ತಿಃ, ಪ್ರಾಕೃತ ಶ್ರುತಭಕ್ತಿಃ, ಸಂಸ್ರೃತ ಚಾರಿತ್ರಭಕ್ತಿಃ, ಪ್ರಾಕೃತ ಚಾರಿತ್ರಭಕ್ತಿಃ, ಸಂಸ್ಕೃತ ಯೋಗಿಭಕ್ತಿಃ, ಪ್ರಾಕೃತ ಯೋಗಿಭಕ್ತಿಃ, ಸಂಸ್ಕೃತ ಆಚಾರ್ಯಭಕ್ತಿಃ, ಪ್ರಾಕೃತ ಆಚಾರ್ಯಭಕ್ತಿಃ ಸೇರಿದಂತೆ ಪಠಣಗಳ ಸಾರವಿದೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books