ದಶಾವತಾರ ಶ್ರೀರಾಮಕಥಾಸುಧಾ (ಬಾಲಕಾಂಡ)

Author : ಕೆ.ಎಸ್‍. ನಾರಾಯಣಾಚಾರ್ಯ

Pages 344

₹ 315.00

Buy Now


Year of Publication: 2016
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ದಶಾವತಾರ ಶ್ರೀರಾಮಕಥಾಸುಧಾ (ಬಾಲಕಾಂಡ) ಕೃತಿಯನ್ನು ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದು, ಶ್ರೀರಾಮನು ಸಹ ದಶಾವತಾರಗಳ ಪೈಕಿ ಒಬ್ಬರು. ಬಾಲಕಾಂಡದಲ್ಲಿ ಈ ಅವತಾರದ ಪ್ರಭಾವ ಹೇಗೆ ವ್ಯಕ್ತವಾಗುತ್ತದೆ? ಆ ಪ್ರಭಾವಗಳ ವೈಶಿಷ್ಟ್ಯ ಹೇಗೆ? ಯಾವ ಉದ್ದೇಶ ಸಾಧನೆಗೆ ಈ ಅವತಾರ ಉದ್ಭವವಾಗಿದೆ? ಇಂತಹ ಅಂಶಗಳ ಹಿನ್ನೆಲೆಯಲ್ಲಿ ಶ್ರೀರಾಮಕಥೆಯು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books