ದಶರೂಪಕ

Author : ಕೆ.ವಿ. ಸುಬ್ಬಣ್ಣ

Pages 360

₹ 260.00




Year of Publication: 2014
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಲಲಿತಕಲಾಶಾಸ್ತ್ರದ  ಪೂರ್ವಪರಂಪರೆಯನ್ನು ಪರಿಚಯಿಸುವುದು ಅಗತ್ಯವಾದ ನೂತನ ಕಲಾಶಾಸ್ತ್ರ.  ಈ ಶತಮಾನದ ನೂತನ ನಾಟ್ಯಶಾಸ್ತ್ರ ಹುಟ್ಟಿ ಬೆಳೆಯಬೇಕಾದರೆ ಭಾರತೀಯ ನಾಟ್ಯಶಾಸ್ತ್ರದ ಪರಂಪರೆ ಸ್ಪಷ್ಟ ತಿಳಿಯಬೇಕು. ಮುಖ್ಯವಾಗಿ, ಸಂಸ್ಕೃತದಲ್ಲಿರುವ ನಾಟ್ಯವಿಷಯಕ ಗ್ರಂಥಗಳೆಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದವಾಗಬೇಕು. ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ಮುಖ್ಯ ಒಂದಾದ 'ದಶರೂಪಕ'ವನ್ನು ಅನುವಾದಿಸಿ ಪ್ರಕಟಿಸುವುದರಲ್ಲಿ ಮೇಲಿನ ಪ್ರಯೋಜನದ ದೃಷ್ಟಿಯೊಂದಿದೆ. 

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books