ದಾಸೋಹ

Author : ಪ್ರಕಾಶ ಗಿರಿಮಲ್ಲನವರ

Pages 316

₹ 500.00




Year of Publication: 2007
Published by: ಪರಮ ಪೂಜ್ಯ ಲಿಂ.ಡಾ. ಶಿವಬಸವ ಸ್ವಾಮಿಗಳು
Address: ರುದ್ರಾಕ್ಷಿಮಠ ನಾಗನೂರ, ಬೆಳಗಾವಿ

Synopsys

‘ದಾಸೋಹ’ ಕೃತಿಯು ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶಕರಾಗಿದ್ದು, ರಾಮಕೃಷ್ಣ ಮರಾಠೆ ಸಂಪಾದಕ ಹಾಗೂ ಪ್ರಕಾಶ ಗಿರಿಮಲ್ಲನವರ ಅವರ ಸಹ ಸಂಪಾದಿತ ಕೃತಿಯಾಗಿದೆ. ವಿದ್ಯಾರ್ಥಿ ಪ್ರಸಾದ ನಿಲಯದ ಅಮೃತ ಮಹೋತ್ಸವ ಸಂಸ್ಮರಣ ಸಂಪುಟ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: `ಲಿಂಗಾಯತ ಧರ್ಮದ ಆಧೈರ್ಯುಗಳಾದ ಬಸವಾದಿ ಶಿವಶರಣರು ಪ್ರತಿಪಾದಿಸಿದ ಮೌಲಿಕ ತತ್ರಗಳಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹಗಳಿಗೆ ಮಹತ್ವದ ಸ್ಥಾನಗಳನ್ನು ಕಲ್ಪಿಸಲಾಗಿದೆ. ವ್ಯಕ್ತಿಯ ಸಾಮಾಜಿಕ, ಆಧ್ಯಾತ್ಮಿಕ ಉನ್ನತಿಗೆ ಕಾರಣವಾಗಿರುವ ಈ ತತ್ವಗಳ ಅನುಷ್ಠಾನದಿಂದ ನಮ್ಮ ರಾಷ್ಟ್ರದ ಜ್ವಲಂತ ಸಮಸ್ಯೆಯಾಗಿರುವ ನಿರುದ್ಯೋಗವನ್ನು ತನ್ಮೂಲಕ ದಾರಿದ್ಯ್ರವನ್ನು ನಿವಾರಿಸಬಹುದಾಗಿದೆ. ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿಯೇ ಜಾರಿಗೆ ತಂದ ಉತ್ಪಾದನೆಯ ಮತ್ತು ವಿತರಣೆಯ ಈ ವೈಜ್ಞಾನಿಕ ವಿಧಾನ ಅಂದರೆ ಕಾಯಕ, ದಾಸೋಹಗಳು ಜಾಗತಿಕ ಮಟ್ಟದಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಬಸವ ಪರಂಪರೆಯ ಲಿಂಗಾಯತ ಮಠಗಳು ಮತ್ತು ಮಠಾಧಿಪತಿಗಳು ಕಾಯಕ-ದಾಸೋಹಗಳ ಮೂಲಕ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿರುವುದಕ್ಕೆ ಇತಿಹಾಸವೇ ಸಾಕ್ಷಿ ಸಮಾಜ ಮತ್ತು ಆಧ್ಯಾತ್ಮದ ಉನ್ನತಿಗೆ ಬದಲಾದ ಪರಿಸ್ಥಿತಿಯಲ್ಲಿ ಶಿಕ್ಷಣವೇ ಪ್ರಮುಖವೆಂಬುದನ್ನರಿತು ಮಠಾಧಿಪತಿಗಳು ತಮ್ಮ ಮಠಗಳನ್ನು ಅನ್ನ ಮತ್ತು ಜ್ಞಾನದಾಸೋಹದ ಕೇಂದ್ರಗಳನ್ನಾಗಿಸಿರುವುದು ಇಂದು ಇತಿಹಾಸ, ಅವುಗಳಲ್ಲಿ ನಾಗನೂರು ರುದ್ರಾಕ್ಷಿಮಠ ಮತ್ತು ಅದರ ಅಧಿಪತಿಗಳಾಗಿದ್ದ ಶಿವಬಸವ ಇತಿಹಾಸದಲ್ಲೊಂದು ಮೈಲಿಗಲ್ಲು. ಮಹಾಸ್ವಾಮಿಗಳವರ ಕಾರ್ಯಸಾಧನೆ ಪೂಜ್ಯ ಶ್ರೀಗಳವರದು ಜಂಗಮ ಕಾಯಕ, ಹಳ್ಳ ಕೊಳ್ಳಗಳನ್ನು ಸುತ್ತಿ, ಗುಡ್ಡ ಬೆಟ್ಟಗಳನ್ನು ಹತ್ತಿ, ಹಳ್ಳಿ ಹಳ್ಳಿಗೆ ಹೋಗಿ , ಧನ ಧಾನ್ಯ ಸಂಗ್ರಹಿಸಿ ಮಕ್ಕಳಿಗೆ ಅನ್ನ ವಸತಿಗಳನ್ನು ಕಲ್ಪಿಸುವ ಕಾಯಕ, 'ಲಿಂಗದ ಮುಖ ಜಂಗಮ'ವೆಂದು ಪರಿಭಾವಿಸಿ ಜನರು ಮುಕ್ತ ಮನದಿಂದ ಸಂಗ್ರಹಿಸಿ ಕೊಟ್ಟಿರುವುದನ್ನು ಶ್ರೀಗಳವರು ಲಿಂಗದ ಮುಖ ಜ೦ಗಮವೆಂದರೆ ಅದು 'ಜನವರ್ಗ' ಅಂದರೆ ಪ್ರಜೆಗಳಿಂದ ಬಂದುದು ಪ್ರಜೆಗಳಿಗೆ ಸಲ್ಲಬೇಕಾದುದು ಎಂಬ ಲಿಂಗಾಯತ ಪ್ರಗತಿಪರ ಧೋರಣೆಗೆ ಪೂರಕವೆಂಬಂತೆ ವಿದ್ಯಾರ್ಥಿಗಳ ಹಿತಚಿಂತನೆಗಾಗಿಯೇ ವಿನಿಯೋಗಿಸಿದ ಜಂಗಮಶ್ರೇಷ್ಠರು. ಪೂಜ್ಯರು ಸ್ಥಾಪಿಸಿದ ಪ್ರಸಾದ ನಿಲಯಕ್ಕೆ ಈಗ 75 ವರ್ಷ. ಝರಿಯಾಗಿ ಹುಟ್ಟಿದ ತೊರೆ, ಇಂದು ಹೆದ್ದೊರೆಯಾಗಿ ಹರಿಯುತ್ತಿದೆ. ಶಾಖೋಪಶಾಖೆಗಳಿಂದ ಹೂ-ಹಣ್ಣು, ಹಕ್ಕಿ ಪಕ್ಕಿಗಳಿಂದ ಕಂಗೊಳಿಸುವ ವಿಶಾಲವೃಕ್ಷದಂತೆ ಮೈದಳೆದು ನಿಂತಿದೆ. ಅನ್ನದಾಸೋಹ ಜ್ಞಾನದಾಸೋಹಗಳೆರಡೂ ಪ್ರಸಾದ ನಿಲಯದ ಅಂಗ-ಪ್ರತ್ಯಂಗಗಳಾಗಿ ನಿರಂತರ ನಡೆಯುತ್ತಿವೆ. ಸಹಸ್ರ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಪ್ರಸಾದ ಸ್ವೀಕರಿಸಿ ಪ್ರಸನ್ನರಾಗಿದ್ದಾರೆ. ತಮ್ಮ ತಮ್ಮ ಬಾಳು ಬೆಳಗಿಕೊಂಡಿದ್ದಾರೆ. ಇತರರ ಬಾಳು ಬೆಳಗಿಸಿದ್ದಾರೆ. ಅವರೆಲ್ಲರೂ ತಮ್ಮ ಮಾತೃಸಂಸ್ಥೆಯ ಅಮೃತಮಹೋತ್ಸವವನ್ನು ಸಂಭ್ರಮದಿಂದ ಜರುಗಿಸುತ್ತಿದ್ದಾರೆ. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ದಾಸೋಹ ಪರಂಪರೆಯನ್ನು 21ನೆಯ ಶತಮಾನದವರೆಗೆ ತಂದು ಮುನ್ನಡೆಸಿರುವ ಲಿಂಗಾಯತ ಮಠಗಳ, ದಾನಿಗಳ ದಾಸೋಹ ಪರಂಪರೆಯನ್ನು ಸ್ಮರಿಸುವ,  ವಿಶ್ಲೇಷಿಸುವ 'ದಾಸೋಹ' ಸಂಪುಟವನ್ನು ಪ್ರಕಟಿಸುತ್ತಿದ್ದಾರೆ’ ಎಂದಿದೆ.

About the Author

ಪ್ರಕಾಶ ಗಿರಿಮಲ್ಲನವರ
(24 August 1980)

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ  (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ.  ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books