ದಟ್ಟ ಧರಣಿ

Author : ಡಾ. ಧರಣೀದೇವಿ ಮಾಲಗತ್ತಿ

Pages 112

₹ 90.00




Year of Publication: 2005
Published by: ಸಾರಾ ಎಂಟರ್ ಪ್ರೈಸಸ್
Address: ನಂ.50, 5ನೇ ಮುಖ್ಯರಸ್ತೆ, ಸುಭಾಷ್ ನಗರ, ಮೈಸೂರು
Phone: 08212496837

Synopsys

‘ದಟ್ಟ ಧರಣಿ’ ಲೇಖಕಿ ಧರಣಿದೇವಿ ಮಾಲಗತ್ತಿ ಅವರ ಅಂಕಣ ಸಂಕಲನ. ಇಲ್ಲಿ ಸ್ತ್ರೀವಾದ ಮತ್ತು ಭಾರತೀಯತೆಯ ಛಿದ್ರೀಕರಣ, ಕೆಂಪು ವೆಲ್ವೆಟ್ಟಿನ ಕುಂಕುಮ, ಹೆಂಡತಿ ಹೊಡೆಯಬೇಕೆನ್ನುವವರು, ಲೈಂಗಿಕ ಕಾರ್ಯಕರ್ತೆಯರೆಂಬ ಡಿಗ್ರಿ, ಸ್ತ್ರೀ ಅಭಿವ್ಯಕ್ತಿ-ಮಾನಿಷಾದ, ಗೆಲ್ಲುವ ಕುದುರೆಯ ಸಲ್ಲಕ್ಷಣಗಳು, ಸಾಂಸ್ಕೃತಿಕ ಅನನ್ಯತೆ-ಮೂರು ಕರಡಿ ಕತೆ, ಕಪ್ಪು ಹುಡುಗಿ-ಬಿಳಿ ಹುಡುಗ, ಮಾತು ಬೆಳ್ಳಿ-ಕೃತಿ ಬಂಗಾರ, ಕುಟುಂಬ ಸೇವಕಿಗೊಂದು ಕಿರೀಟ, ಸ್ತ್ರೀ ಪುರುಷರು ವಿರುದ್ಧ ಧ್ರುವಗಳೆ, ಪುಂ ಸ್ರ್ತೀತ್ವ ನ್ಯಾಯ, ಜಾಗತೀಕರಣ: ಅನಿವಾರ್ಯ ಅನಿಷ್ಟ, ಸಲಿಂಗಕಾಮ ಎಷ್ಟು ಸಹಜ, ಹಿಂಸೆಗೆ ಎಷ್ಟು ಮುಖ, ಹೊಸ್ತಿಲ ಹೊರಗಿನ ಕಿರುಕುಳ, ತಾಳಿಯಿಂದ ಮುಕ್ತಿ, ಅಂಗ ಪ್ರದರ್ಶನದ ಆಂತರ್ಯ, ಷೇರುವಿಕ್ರಯದ ಒಂದು ಮುಖ, ಸ್ತ್ರೀ ಸಂಸ್ಕೃತಿಯ ಬಹುರೂಪ, ತುಳಿತಕ್ಕೆ ಆರಾಝನೆಯ ಮುಸುಕು, ನೇಪಥ್ಯದ ದನಿಗಳು, ಫಲವಿಲ್ಲದಿರಲೇನು ಛಲವಿರಲಿ ಮನಕೆ, ಶಿಕ್ಷಣದ ಹೊಸ ಪರಿಭಾಷೆ ಹಾಗೂ ಸಮರಸದ ಯುಗಾದಿ ಎಂಬ 25 ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books