ಡಿಕೆಮರಾನ್

Author : ಬಿ. ಜನಾರ್ದನ ಭಟ್

Pages 218

₹ 150.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560172
Phone: 196 - 23183311, 23183312

Synopsys

650 ವರ್ಷಗಳಿಂದಲೂ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ ಈ ಕೃತಿ ಇಂಗ್ಲಿಷ್ ಸಾಹಿತ್ಯದ ಪಿತಾಮಹ ಚಾಸರ್​ನಿಗೆ ‘ಕ್ಯಾಂಟರ್​ಬರಿ ಟೇಲ್ಸ್’ ಬರೆಯಲು ಸ್ಪೂರ್ತಿ ನೀಡಿರುವ ಕೃತಿ ಡಿಕೆಮೆರಾನ್. ಈ ಕಾದಂಬರಿಯ ಕಥಾಹಂದರವೆಂದರೆ ಪ್ಲೇಗ್​ನಿಂದ ತಪ್ಪಿಸಿಕೊಳ್ಳಲು ಇಟಲಿಯ ಏಳು ಮಂದಿ ಶ್ರೀಮಂತ ಯುವತಿಯರು ಮೂವರು ಯುವಕರ ಜತೆ ನಗರದಿಂದ ದೂರ ಹಳ್ಳಿಗಳಿಗೆ ತೆರಳುತ್ತಾರೆ. ತಮ್ಮಲ್ಲಿಯೇ ದಿನಕ್ಕೊಬ್ಬರನ್ನು ರಾಜ ರಾಣಿ ಎಂದು ಆಯ್ಕೆ ಮಾಡಿಕೊಳ್ಳುತ್ತ ಅವರು ಸೂಚಿಸಿದ ವಿಷಯದ ಬಗ್ಗೆ ಕಥೆ ಹೇಳುತ್ತಿರುತ್ತಾರೆ. ಯುರೋಪಿನ ನವೋದಯದ ಪ್ರಮುಖ ಕೃತಿಗಳಲ್ಲಿ ಒಂದಾದ ಈ ಪುಸ್ತಕ ಅಂದಿನ ಇಟಾಲಿಯನ್ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತದೆ. ಹೆಚ್ಚಿನ ಕಥೆಗಳು ನೈತಿಕತೆಗೆ ಸವಾಲೊಡ್ಡುವವೇ ಆಗಿದ್ದರೂ ಅವು ಅಂದಿನ ವಾಸ್ತವವೂ ಆಗಿದ್ದವು. ಭಟ್ಟರ ಅನುವಾದವೂ ಸರಳವಾಗಿದ್ದು ಆಸಕ್ತಿಯನ್ನು ಕೆರಳಿಸಲು ಸಫಲವಾಗಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Reviews

 

ಡಿವೈನ್ ಕಾಮಿಡಿಯಿಂದ ಹ್ಯೂಮನ್‌ ಕಾಮಿಡಿಯವರೆಗೆ

ಕಳೆದ ವರ್ಷ ಬಿಡುಗಡೆಯಾದ The QLittle Hours ಎಂಬ ಅಮೆರಿಕನ್ ಹಾಸ್ಯ ಚಲನಚಿತ್ರವೊಂದು ಹಲವು ಕಾರಣಗಳಿಂದ ವಿಮರ್ಶಕರ ಗಮನ ಸೆಳೆಯಿತು. ಕಾಲವಿರೋಧಾತ್ಮಕ ಶೈಲಿಯ ಕಥೆಯ, ಆದರೆ ಸಮಕಾಲೀನ ಶೈಲಿಯ ನಡವಳಿಕೆ ಮತ್ತು ಸಂಭಾಷಣೆಯ, ಜೆಫ್ ಬೀನಾ ನಿರ್ದೇಶಿಸಿದ್ದ ಆ ಚಿತ್ರ ತನ್ನ ಕಥೆ, ನಿರೂಪಣೆ ಮತ್ತು ನಟನೆಯ ವೈವಿಧ್ಯದಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಪ್ರಶಂಸೆಯನ್ನೂ ಗಳಿಸಿತ್ತು. ಆರೇಳು ಶತಮಾನಗಳಷ್ಟು ಹಿಂದಿನ, ಗ್ರಾಮಾಂತರ ಪ್ರದೇಶದ ಕಾನ್ವೆಂಟ್ ಒಂದರ ಮೂವರು ಸನ್ಯಾಸಿನಿಯರು ಮತ್ತು ಕಿವುಡ ಮೂಕನಂತೆ ನಟಿಸುತ್ತಿದ್ದ ತರುಣ ತೋಟದ ಮಾಲಿಯೊಬ್ಬನ ನಡುವಣ ಬೊಕಾಚಿ ಅನೈತಿಕ ಸಂಬಂಧದ ಕಥೆಯನ್ನು ತುಂಟಾಟದಂತೆ ಜನ ಹೇಳುವ ಈ ಚಿತ್ರಕಥೆಯು ಹದಿನಾಲ್ಕನೆಯ ಶತಮಾನದ ಇಟಾಲಿಯನ್ ಕಥೆಗಾರ ಜಿಯಾವನಿ 'ಬೊಕಾಚಿಯೋನ ಡಿಕೆಮರಾನ್' ಎಂಬ ಕೃತಿಯ ಒಂದು ಭಾಗಕ್ಕೆ ಋಣಿಯೆಂದು ತಿಳಿದಾಗ ಆ ಕೃತಿಯ ಕುರಿತು ಜಗತ್ತಿನಾದ್ಯಂತ ಕುತೂಹಲ ಮತ್ತು ಆಸಕ್ತಿ ಹುಟ್ಟಿಕೊಂಡಿತಂತೆ. ಆದರೆ, ಬೊಕಾಚಿಯೋನ ಈ ಕೃತಿಯನ್ನು ಕನ್ನಡಸಾಹಿತ್ಯಲೋಕ, ಮಾತ್ರವಲ್ಲ ನಮ್ಮ ದೇಶದ ಯಾವ ಭಾಷೆಯೂ ಕಂಡು ಕೇಳರಿಯದ ಹೊತ್ತೊಂದರಲ್ಲಿ ಎಂದರೆ ಹದಿನಾಲ್ಕು ವರ್ಷಗಳಿಗೂ ಹಿಂದೆ, ಬಿ. ಜನಾರ್ದನ ಭಟ್ಟರು ಕನ್ನಡಕ್ಕೆ ಅನುವಾದಿಸಿದ್ದು. ಅದು ಮಾಸಪತ್ರಿಕೆಯೊಂದರ 2004-05ರ ಅವಯಲ್ಲಿ ಧಾರಾವಾಹಿಯಾಗಿ ಪ್ರಕಟವಾದದ್ದನ್ನು ನಮ್ಮವರು ಗುರುತಿಸಿರಲೇ ಇಲ್ಲ, ಕಾಲಗರ್ಭದಲ್ಲಿ ಮಸುಕಾಗಿ, ಬಹುಮಟ್ಟಿಗೆ ಮರೆತೇ ಹೋಗಿದ್ದ ಡಿಕೆಮರಾನ್' ಅನ್ನು ಸಮಕಾಲೀನ ಭಾರತೀಯ ಲೇಖಕರು ಕೈಗೆತ್ತಿಕೊಳ್ಳುವ ಮೊದಲೇ, ಗುರುತಿಸಿ, 

ಅನುವಾದಿಸಿ ಪ್ರಕಟಿಸುವಲ್ಲಿ ಜನಾರ್ದನ ಭಟ್ಟರೊಳಗಿನ ವಿಮರ್ಶಕ ಸೂಕ್ಷ್ಮಮತಿ ಕೆಲಸಮಾಡಿದ್ದನ್ನು ನಾವಿಲ್ಲಿ ಗುರುತಿಸಲೇ ಬೇಕು. - ಕೆಮರಾನ್ ನ ಕಥೆ ಬಹಳ ಸರಳವಾದುದು. ಅಷ್ಟಿಷ್ಟು ಪೋಲಿಯೂ ಹೌದು. ಹದಿನಾಲ್ಕನೆಯ ಶತಮಾನದಲ್ಲಿ ಭಯಾನಕವಾದ ಪ್ಲೇಗ್ ರೋಗವು ರೋಮ್ ನಗರದಲ್ಲಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾದಾಗ, ಏಳುಮಂದಿ ಶ್ರೀಮಂತ ಯುವತಿಯರು ಮತ್ತು ಮೂವರು ಶ್ರೀಮಂತ ಯುವಕರು, ತಮ್ಮ ಸೇವಕರೊಂದಿಗೆ ನಗರವನ್ನು ಬಿಟ್ಟು ಹಳೆಯ ವಿಹಾರಧಾಮಗಳಿಗೆ ಹದಿನೈದು ದಿನಗಳ ಕಾಲ ವಲಸೆಹೋಗಿ, ಅಲ್ಲಿ ಸಮಯ ಕಳೆಯಲು ಪ್ರತಿದಿನವೂ ಪ್ರತಿಯೊಬ್ಬರೂ ಒಂದೊಂದು ಕಥೆ ಹೇಳುತ್ತಾ ಹತ್ತು ದಿನಗಳಲ್ಲಿ ನೂರು ಕಥೆ ಹೇಳುತ್ತಾರೆ. ಈ ಹತ್ತುದಿನಗಳಲ್ಲಿ ದಿನಕ್ಕೊಬ್ಬರು ಏಚಿಯೋನ ರಾಜ ರಾಣಿಯೋ ಮರಾನ್ ಎಂದು ಗುರುತಿಸಲ್ಪಟ್ಟು ಅವರ ಆದೇಶದ ವಿಷಯದ ಮೇಲೆ ಕಥೆ ಹೇಳಬೇಕಂಬ ನಿಯಮ ಕಲ್ಪಿಸಿಕೊಳ್ಳುವುದರಿಂದ ಅಲ್ಲೊಂದಿಷ್ಟು ಸ್ವಾರಸ್ಯವೂ ಹುಟ್ಟಿಕೊಳ್ಳುತ್ತದೆ.

ಒಂದೊಂದು ದಿನ ತಂತ್ರ ಪ್ರತಿ ತಂತ್ರಗಳಿಂದ 'ತಮಗೆ ಬೇಕಾದವರನ್ನು ಪಡೆಯುವ ವಿಷಯ'ದ ಕುರಿತು, 'ದುರಂತ ಪ್ರೇಮ'ದ ಕುರಿತು, ಸುಖಪಡಲೆಂದು ಏನೇನೋ ಮಾಡುವ ಪ್ರೇಮಿಗಳನ್ನು ಕುರಿತು, ಗಂಡಂದಿರನ್ನು ಚಾಣಾಕ್ಷತೆಯಿಂದ ವಂಚಿಸಿ ಪರ ಪುರುಷರೊಡನೆ ರಮಿಸುವ ಹೆಂಡಂದಿರ ಕುರಿತು, ಪರಸ್ಪರ ವಂಚಿಸುವ ಗಂಡು ಹೆಣ್ಣುಗಳ ಕುರಿತು ಇವರು ಕಥೆಗಳನ್ನು ಹೇಳಿಕೊಳ್ಳುತ್ತಾರೆ. ಈ ಕಥೆಗಳಲ್ಲಿ ಧಾರ್ಮಿಕ ಡಂಬಾಚಾರವನ್ನು ಲೇವಡಿಮಾಡುವ, ಅನೈತಿಕ ಸಂಬಂಧಗಳನ್ನು ನಿರಾಯಾಸವಾಗಿ ಒಪ್ಪಿಕೊಳ್ಳುವ, ಸಮರ್ಥಿಸುವ, ಕೊಂಚ ಪೋಲಿ ಎನ್ನಿಸುವ, ಗ್ರಾಮ್ಯ, ಹಾಸ್ಯ, ಅಶ್ಲೀಲ ಕಥೆಗಳೂ ಬಂದು ಹೋಗುತ್ತವೆ. ಆದರೆ ಕಥೆಗಳನ್ನು ಹೇಳುವವರು ಯಾರೂ ತಮ್ಮ ಚಾರಿತ್ರ್ಯವನ್ನು ಕೆಡಿಸಿಕೊಳ್ಳುವ ಕೆಲಸವನ್ನು ಮಾಡುವುದಿಲ್ಲ. ಈ ಕಥೆಗಳು ಖಿನ್ನತೆಯನ್ನು ಕಳೆದು ದೇಹ ಮನಸ್ಸುಗಳಲ್ಲಿ ಚೈತನ್ಯವನ್ನು ಪಡೆಯುವ ಉದ್ದೇಶವನ್ನಷ್ಟೇ ಹೊಂದಿವೆ ಎನ್ನುವ ಮಾತೂ ಇಲ್ಲಿ ಬಂದುಹೋಗುತ್ತದೆ. - ಈ ಕಥೆಗಳನ್ನು ಜನಪದ ಮೂಲಗಳಿಂದ, ಭಾರತದ ಕಥಾ ಸರಿತ್ಸಾಗರ ಮತ್ತಿತರ ಮೂಲಗಳಿಂದ ಸಂಗ್ರಹಿಸಿದ ಬೊಕಾಚಿಯೊ ಡಿಕೆಮರಾನ್ ಕೃತಿಯನ್ನು ರಚಿಸಿದ್ದು ಹದಿನಾಲ್ಕನೆಯ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನಲ್ಲಿ ತದನಂತರದ ವರ್ಷಗಳಲ್ಲಿ ಆರಂಭವಾದ Renaissance ಎಂಬ ಸಾಂಸ್ಕೃತಿಕ ನವೋದಯದ ಚಳವಳಿಯ ಮೂಲಕ ಬದಲಾದ ಮನೋದೃಷ್ಟಿಯ ಸಾಹಿತ್ಯ ಚಳವಳಿಯ ಲೇಖಕರಲ್ಲಿ ಮುಖ್ಯವಾಗಿ ಜಾನ್ ಎಕ್ಸಿಫ್, ಜಾನ್ ಗವರ್, ಜಪ್ತಿ ಚಾಸರ್ ಮೊದಲಾದವರು ಬೊಕಾಚಿಯೋನ ಪ್ರಭಾವಕ್ಕೆ ಒಂದಿಷ್ಟು ಒಳಗಾಗಿದ್ದಂತೆ ಕಾಣಿಸುತ್ತದೆ. ಚರ್ಚುಗಳಲ್ಲಿನ ಅನೀತಿ, ಸುಖಲೋಲುಪತೆಯನ್ನು ಬರಹದಲ್ಲಿ ಟೀಕಿಸುವ ಭೂಕಾಚಿಯೋನನ್ನು ಆ ಕಾಲದ ನವೋದಯದ ಹಲವು ಸಾಹಿತಿಗಳು ಅನುಸರಿಸಿದ್ದರು. ಚಾಸೇರ್‌ನ ಕ್ಯಾಂಟರ್ಬರಿ ಟೇಲ್ಸ್ ನ ಕಟ್ಟೋಣವೂ ಡಿಕೆಮರಾನ್ ಗೆ ಋಣಿಯಿದ್ದಂತಿದೆ. ಕ್ಯಾಂಟರ್ಬರಿಯಲ್ಲಿರುವ ಬೆಕೆಟ್ ಎಂಬ ಸಾಧುವಿನ ಸಮಾಜಿಯ ದರ್ಶನಕ್ಕೆ ಹೊರಟ ಯಾತ್ರಿಕರು ಸಮಯ ಕಳೆಯಲು ಹೇಳಿಕೊಂಡ ಕಥಗಳ ನಿರೂಪಣಾಕ್ರಮವೂ ಭೂಕಾಚಿಯೋವನ್ನು ಅನುಕರಿಸಿದಂತಿದೆ. ಈ ಕಾರಣಗಳಿಂದಲೇ ಕೆಲವು ವಿಮರ್ಶಕರು ಡಿಕೆಮರಾನ್ ಕೃತಿಯು ದಾಂತೆಯ ಡಿವೈನ್ ಕಾಮಿಡಿಗೆ ಪೂರಕವಾದ ಹೂಮನ್ ಕಾಮಿಡಿಯಾಗಿದೆ' ಎಂದಿರಬಹುದು. ಜನಾರ್ದನ ಭಟ್ಟರಂತೂ ಈ ಮೂಲಕ ಬೋಕಾಚಿಯೋ ಲೌಕಿಕವನ್ನು ಬೆಳಗಿದ' ಎಂದಿದ್ದಾರೆ.

ಡಿಕೆಮರಾನ್ ನಮಗೆ ಮುಖ್ಯವೆನ್ನಿಸುವುದು ಮೂರು ಕಾರಣಗಳಿಂದ, ಒಂದು: ಈ ಕೃತಿಯ ಚಾರಿತ್ರಿಕ ಮಹತ್ವ: ಎರಡು: ಮುಂದಿನ ತಲೆಮಾರಿನ ಸಾಹಿತಿಗಳ ಮನೋಧರ್ಮಕ್ಕೆ ದಿಕೂಚಿಯಾಗಬಲ್ಲ ಸಾಹಿತ್ಯಕ ಮಹತ್ವ ಮತ್ತು ಮೂರನೆಯದು: ಅಪರಿಚಿತ ಕೃತಿಯೊಂದನ್ನು ತಕ್ಕ ಕಾಲದಲ್ಲಿ ಗುರುತಿಸಿ, ಅದನ್ನು ಸರಸವೂ ಸ್ವೀಕಾರಾರ್ಹವೂ ಆದ ಗದ್ಯದಲ್ಲಿ ಕನ್ನಡಕ್ಕೆ ತೆಗೆದುಕೊಂಡುಬಂದ ಜನಾರ್ದನ ಭಟ್ಟರ ಸಾಹಸದ ಮಹತ್ವ. ಈ ಕಾರಣಗಳಿಂದಾಗಿ ಅನುವಾದಕರು ಅಭಿನಂದನಾರ್ಹರು.

ವಿಭಾವರಿ ಭಟ್‌ 22 ಡಿಸೆಂಬರ್‌ 2019

ಕೃಪೆ: ಹೊಸದಿಗಂತ

ಡಿಕೆಮೆರಾನ್‌ ಬಗ್ಗೆ ಒಂದಿಷ್ಟು: ವಿಜಯಕರ್ನಾಟಕದಲ್ಲಿ

 

Related Books