ದೀಡೆಕರೆ ಜಮೀನು

Author : ಮಲ್ಲಿಕಾರ್ಜುನ ಶೆಲ್ಲಿಕೇರಿ



Year of Publication: 2022
Published by: ಕಾಚಕ್ಕಿ ಪ್ರಕಾಶನ
Address: # 72,ದೈವ ಕೃಪ ಡಿ ಗ್ರೂಫ್‌ ಬಡಾವಣೆ ಕೆ. ಆರ್.‌ ಎಸ್‌ ಅಗ್ರಹಾರ ಕುಣಿಗಲ್-‌572130\n
Phone: 8660788450

Synopsys

'ದೀಡೆಕರೆ ಜಮೀನು' ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕಥಾಸಂಕಲನ. ಮಹಾಪೂರ ಕಥೆ ತುಂಬಾ ವಾಸ್ತವವಾಗಿ ಹೆಣೆದ ಕತೆಯಾಗಿದೆ. ಭೋರ್ಗರೆಯವ ಚಂದ್ರಪ್ರಭ ನದಿಯ ಮೂಲಕ ಕಥಾನಕದ ದ್ರವ್ಯ ನವಿರಾಗಿ ಜಿನುಗುತ್ತ ಸಾಗುತ್ತದೆ. ಮಹಾಪೂರದಿಂದ ಉಂಟಾದ ಜಂಜಾಟವೇ ಇಲ್ಲಿ ಕತೆಯ ಮೂಲ ದ್ರವ್ಯವಾಗಿದೆ. ನರಿತ ಕುಶಲ ಕತೆಗಾರರಾದ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತುಂಬಾ ಜಾಣ್ಮೆ ಹಾಗೂ ನಾಜೂಕಿನಿಂದ ಕತೆಯನ್ನು ಹೆಣೆದು ನವಿರಾಗಿ ನಿರೂಪಣೆ ಮಾಡಿದ್ದಾರೆ. ಚಂದ್ರಪ್ರಭ ನದಿಯ ಮಹಾಪೂರದಿಂದ ಸದಾ ಬದುಕಿನ ಭರವಸೆ ಕಳೆದುಕೊಳ್ಳುವ ರುದ್ರಾಪೂರದ ಜನತೆಯ ಆತಂಕ, ಜನ, ಜಾನುವಾರಗಳ ಮೂಕರೋಧನ, ಪ್ರಶಾಂತ ದೇಸಾಯಿಯವರಂಥ ಅಷಾಢಭೂತಿಗಳ ಸ್ವಾರ್ಥ ಮತ್ತು ಸಮಯ ಸಾಧಕತನ ಇಲ್ಲಿ ತುಂಬಾ ಮೊನಚಾಗಿ ತೆರೆದುಕೊಂಡಿವೆ. ದೇಸಾಯಿಯಂತಹ ರಾಜಕಾರಣಿ ಹಾಗೂ ರುದ್ರಾಪೂರದಂಥ ಹಳ್ಳಿಯನ್ನು ಸಾಂಕೇತಿಕವಾಗಿ ಬಳಸಿಕೊಂಡು, ಗೋಸುಂಬೆಯಂತಹ ರಾಜಕಾರಣಿಗಳು ಹೇಗೆ ಕಾಲಕಾಲಕ್ಕೆ ಬಣ್ಣ ಬದಲಾಯಿಸುತ್ತಾರೆ ಎಂಬುದನ್ನು ಕತೆಯಲ್ಲಿ ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ಯಶವಂತ ಹರಗಿ ಪುಸ್ತಕದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

About the Author

ಮಲ್ಲಿಕಾರ್ಜುನ ಶೆಲ್ಲಿಕೇರಿ

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು‌ 1998 ರ ಗೆಜೆಟೆಡ್ ಪ್ರೋಬೆಷನರ್ ಬ್ಯಾಚ್ ನ ಅಧಿಕಾರಿ. ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿ.ಎ.ಓ ಹುದ್ದೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ . ಕಾಲೇಜು ದಿನಗಳಿಂದಲೂ ಸಾಹಿತ್ಯ ಆಸಕ್ತಿ ಹೊಂದಿದ್ದ ಅವರು ಕಥೆ ಕವನ,ಚುಟುಕುಗಳು ಕಾಲೇಜ್‌ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕಥೆ,ಚುಟುಕು,ಹಾಸ್ಯಬರಹ,ಲೇಖನಗಳು ಮಯೂರ, ಕರ್ಮವೀರ,ತುಷಾರ,ಸಮಾಜಮುಖಿ,ವಿಜಯವಾಣಿಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ .ಕಥೆಗಳು ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರವಾಗಿವೆ, ಪ್ರಸ್ತುತ ಲೋಕಾರ್ಪಣೆಯಾಗುತ್ತಿರುವ ಅವರ "ದೀಡೆಕರೆ ಜಮೀನು" ಕಥಾಸಂಕಲನ ಅವರ ಪ್ರಥಮ ಕೃತಿಯಾಗಿದೆ. ಕೃತಿ- ದೀಡೆಕರೆ ಜಮೀನು ...

READ MORE

Related Books