ಡೆಪ್ಯೂಟಿ ಚೆನ್ನಬಸಪ್ಪ

Author : ರಾಮಚಂದ್ರ ವ್ಹಿ. ಪಾಟೀಲ

Pages 140

₹ 100.00




Year of Publication: 2018
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

‘ಡೆಪ್ಯೂಟಿ ಚನ್ನಬಸಪ್ಪ’ ಸಿವಿಜಿ ಪಬ್ಲಿಕೇಷನ್ಸ್ ‘ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲಿಕೆ’ಯಲ್ಲಿ ಪ್ರಕಟವಾದ ಕೃತಿ. 1973ರಲ್ಲಿ ಕರ್ನಾಟಕ ಏಕೀಕರಣವಾದ ಸಂದರ್ಭದಲ್ಲಿ ನಾಡು ನುಡಿಗಾಗಿ ಹೋರಾಡಿದ ಮಹನೀಯರ ಕುರಿತಾಗಿ ಮಕ್ಕಳಿಗೆ ತಿಳಿಸುವ ಸಲುವಾಗಿ ಪ್ರಕಟವಾದ ಈ ಕೃತಿಯನ್ನು ಪ್ರೊ. ರಾಮಚಂದ್ರ ವ್ಹಿ ಪಾಟೀಲರು ರಚಿಸಿದ್ದಾರೆ. ಕರ್ನಾಟಕ ಏಕೀಕರಣದ ವೇಳೆ ಕನ್ನಡಕ್ಕಾಗಿ ಹೋರಾಡಿದ, ದುಡಿದ ಡೆಪ್ಯೂಟಿ ಚನ್ನಬಸಪ್ಪನವರ ಹೋರಾಟದ ಕುರಿತು ಬೆಳಕು ಚೆಲ್ಲುವ ಕೃತಿ ಇದು. 

About the Author

ರಾಮಚಂದ್ರ ವ್ಹಿ. ಪಾಟೀಲ

ರಾಮಚಂದ್ರ ಪಾಟೀಲ ಅವರು ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಗಲಗೊಂಬದಲ್ಲಿ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಬಾಗಲಕೋಟೆಯಲ್ಲಿ, ಬಿ.ಇ.ಡಿ. ಪದವಿಯನ್ನು ಜಮಖಂಡಿಯಲ್ಲಿ, ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಡೆದರು. ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂಬಲದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸೇರಿ, ಬಾಗಲಕೋಟೆ, ಮುಧೋಳ ಮತ್ತು ಧಾರವಾಡದ ಪ್ರತಿಷ್ಠಿತ ಸರಕಾರಿ ಟ್ರೇನಿಂಗ್ ಕಾಲೇಜು (DIET) ನಲ್ಲಿ ಸೇವೆ ಸಲ್ಲಿಸಿದರು. ಜೊತೆಗೆ ಟ್ರೇನಿಂಗ್ ಕಾಲೇಜಿನ ಮುಖವಾಣಿಯಾದ 'ಜೀವನ ಶಿಕ್ಷಣ' ಶೈಕ್ಷಣಿಕ ಮಾಸಪತ್ರಿಕೆಯ ಸಂಪಾದಕರಾಗಿ ಸುಮಾರು ಹದಿನೈದು ವರ್ಷ ಸೇವೆ ಸಲ್ಲಿಸಿದರು. ...

READ MORE

Related Books