ದೇಶಾವಲೋಕನ

Author : ಗುರುರಾಜ್ ದೇಶಪಾಂಡೆ

Pages 142

₹ 180.00




Year of Publication: 2016
Published by: ವಸಂತ ಪ್ರಕಾಶನ
Address: # 360, 10ನೇ ಬಿ-ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-560011
Phone: 08022443996

Synopsys

ಇಂದಿನ ಸ್ಟಾರ್ಟ್ ಅಫ್ ಯುಗದಲ್ಲಿ ಉದ್ಯಮಶೀಲತೆಯ ನಿರಂತರತೆಯನ್ನು ಖಚಿತವಾಗಿ ಹೇಳುವುದು ಕಷ್ಟ. ಅಭಿವೃದ್ಧಿಯ ನೆಪದಲ್ಲಿ ಓಟದ ವೇಗ ಹೆಚ್ಚುತ್ತಿದೆ. ಈ ಪೈಪೋಟಿ ಮಧ್ಯೆ ಅಡ್ಡ ದಾರಿಗಳು ತೆರೆದು ಕೊಳ್ಳುತ್ತಿವೆ. ಉದ್ಯಮದಲ್ಲಿ ಇಂತಹ ಯಶಸ್ಸಿನ ಆಯಸ್ಸು ಕಡಿಮೆ ಎಂಬ ಚಿಂತನೆ ಒಂದೆಡೆಯಾದರೆ, ಶ್ರಮದ ಮೂಲಕ ಕಟ್ಟಿದ ಉದ್ಯಮ ನೈಜ ಅಭಿವೃದ್ಧಿಗೆ ಪೂರಕ ಎಂಬ ವ್ಯಾಖ್ಯಾನವೂ ಗೊಂದಲ ಸೃಷ್ಟಿಸುತ್ತಿದೆ. ಇಂತಹ ಅಸ್ಪಷ್ಟತೆ ಮಧ್ಯೆಯೂ ಲೇಖಕ ಗುರುರಾಜ್ ದೇಶಪಾಂಡೆ ಅವರು, ಉದ್ಯಮಶೀಲ ಮನೋಭಾವ ಹಾಗೂ ಅದರಿಂದ ಆಗುವ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ತಮ್ಮ ಕೃತಿ ’ದೇಶಾವಲೋಕನ’ದಲ್ಲಿ ವಿಶ್ಲೇಷಿಸಿದ್ದಾರೆ. ಉದ್ಜಯಮವಲಯದಲ್ಲಿ ಜನಪ್ರಿಯತೆಯನ್ನು ಪರಿಗಣಿಸಿಲ್ಲ. ಸಂಭವಿಸಬಹುದಾದ ನಿಲುವು-ಸಂಗತಿಗಳನ್ನುಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಉದ್ಯಮದಲ್ಲಿ ತಾತ್ಕಾಲಿಕ ಲಾಭಕ್ಕಿಂತ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ದೂರದೃಷ್ಟಿಯ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಲಾಭದಾಯಕ ಉದ್ಯಮ ಹಾಗೂ ಲಾಭವಿರದ ಸಮಾಜಸೇವೆ ಹೀಗೆ ಎರಡರಲ್ಲೂ ಲೇಖಕರಿಗೆ ಅಪಾರ ಅನುಭವದ ಗಟ್ಟಿತನ ಇರುವುದರಿಂದ ಈ ಕೃತಿಯ ಮೂಲಕ ವ್ಯಕ್ತಪಡಿಸಿದ ವಿಚಾರ-ಅಂಶಗಳಿಗೆ ಹೆಚ್ಚು ಮಹತ್ವವೂ ಬಂದಿದೆ. ಸ್ಟಾರ್ಟ್ ಅಪ್ ಲೋಕದ ಯುವಕ-ಯುವತಿಯರಿಗೆ ಈ ಕೃತಿ ಉತ್ತಮ ಒಳನೋಟಗಳನ್ನು ಹಾಗೂ ಮಾರ್ಗದರ್ಶಿಯಾಗಿಯೂ ಮಾಹಿತಿ ನೀಡುತ್ತದೆ. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಕೃತಿಯ ಮುನ್ನುಡಿಯಲ್ಲಿ ’ನಿಮ್ಮ ನಿಮ್ಮ ಉದ್ಯಮಶೀಲ ಯೋಜನೆಗಳ ಹಿನ್ನೆಲೆಯಲ್ಲಿಯೇ ಈ ಪುಸ್ತಕವನ್ನು ಓದಿ. ಇಲ್ಲಿರುವ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ’ ಎನ್ನುವ ಮೂಲಕ ಕೃತಿಕಾರರ ಬರೆಹ ಕಾಳಜಿಯನ್ನು ಪ್ರಶಂಸಿಸಿ, ಉದ್ಯಮಶೀಲರಿಗೂ ಸಲಹೆ ನೀಡಿದ್ದಾರೆ.

About the Author

ಗುರುರಾಜ್ ದೇಶಪಾಂಡೆ

ಹುಬ್ಬಳ್ಳಿ ಮೂಲದ ಗುರುರಾಜ್ ದೇಶಪಾಂಡೆ ಅವರು ಅಮೆರಿಕದ ಬಾಸ್ಟನ್ ನಲ್ಲಿ ನೆಲೆ ನಿಂತವರು. ಬಿಟೆಕ್-ಎಂಇ ಪದವೀಧರರು. ಡಾಕ್ಟರೇಟ್ ಸಹ ಪಡೆದಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಲಹೆ ನೀಡುವ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.  ಕಳೆದ ಮೂರು ದಶಕಗಳಿಂದ  ಉದ್ಯಮಶೀಲರಾಗಿ, ಕ್ಯಾಸ್ಕೇಡ್ ಕಮ್ಯುನಿಕೇಷನ್ಸ್ ಹಾಗೂ ಸೈಕ್ ಮೋರ್ ನೆಟ್ ವರ್ಕ್ಸ್ ನಂತಹ ಕಂಪನಿಗಳನ್ನು ಸ್ಥಾಪಿಸಿದ್ದು, ಇವರೀಗ ’ದೇಶಪಾಂಡೆ ಫೌಂಡೇಶನ್’ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದಿಂದ ಪಡೆದಿದ್ದನ್ನು ಮರಳಿ ಸಮಾಜಕ್ಕೆ ಸಮರ್ಪಿಸುವ ಸಂಕಲ್ಪ ಅವರದ್ದು. ಇವರ ದೇಶಪಾಂಡೆ ಫೌಂಡೇಶನ್ ಇದೀಗ ಭಾರತ, ಅಮೆರಿಕ ಹಾಗೂ ...

READ MORE