ದೇವಚಂದ್ರನ ರಾಜಾವಳಿ ಕಥಾಸಾರ

Author : ಶಿವರಾಮಯ್ಯ

Pages 72

₹ 100.00




Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ #326, `ಚೈತ್ರ\', ಮೊದಲನೇ ಮಹಡಿ, 5ನೇ ತಿರುವು, 5ನೇ ಬ್ಲಾಕ್, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ, ಬೆಂಗಳೂರು-560085
Phone: 9740069123 / 9739561334

Synopsys

ದೇವಚಂದ್ರನ ವ್ಯುತ್ಪತ್ತಿ ಜ್ಞಾನ ಅಸಾಧಾರಣ; ಅವನ ಲೋಕಾನುಭವವಂತೂ ಮೈಜುಂದಟ್ಟಿಸುವಂತಿದೆ. ಅವನಿಗೆ ವೇದ, ವೇದಾಂತ, ಸಿದ್ಧಾಂತಗಳ ಪೂರ್ಣ ಪರಿಚಯವಿತ್ತು; ಷಟ್‌ದರ್ಶನಗಳಾದ ಕಾಣಾದ, ಮೀಮಾಂಸಕ, ಸಾಂಖ್ಯ, ಬೌದ್ಧ ಮತ್ತು ಚಾರ್ವಾಕ ಇವುಗಳ ತಾರ್ಕಿಕ ಲಯ ಗೊತ್ತಿತ್ತು.; ಚಂದ್ರಗುಪ್ರ ಮೌರ್ಯ ಮೊದಲುಗೊಂಡು ನಮ್ಮ ಮೈಸೂರು ಒಡೆಯರವರೆಗಿನ ರಾಜಾವಳೀ ಇತಿಹಾಸದ ಜ್ಞಾನವಿತ್ತು; ತುರುಕರು ಹಾಗೂ ಇಂಗರೇಜಿ ಆಡಳಿತಗಳನ್ನು ಆತ ಕಂಡುಂಡವನಾಗಿದ್ದ; ಹಾಗೆಯೇ ಹಿಂದೂ, ಮುಸಲ್ಮಾನ, ಕೈಸ್ತ, ಪಾರ್ಸಿ ಮುಂತಾದ ಮತಧರ್ಮಗಳ ಬಗ್ಗೆ ಆತನಿಗೆ ತಿಳಿದಿತ್ತು. ಸತ್ಯ, ಪ್ರೇಮ, ಕರುಣೆಗಳೇ ಪ್ರತಿಯೊಂದು ಧರ್ಮದ ಮೂಲ ಸೆಲೆಯಾಗಿರುವಾಗ ಪ್ರಪಂಚದಲ್ಲಿ ಇಷ್ಟೊಂದು ಮತ ಧರ್ಮಗಳು ಏಕೆ ಹುಟ್ಟಿಕೊಂಡವೋ ತಿಳಿಯದು. ಇವತ್ತು ಭಿನ್ನಮತೀಯ ನಾಯಕರು ಹೊಸ ಹೊಸ ಪಕ್ಷಗಳನ್ನು ಹುಟ್ಟಿಹಾಕಿದಂತೆ ಹಿಂದಿನ ಕಾಲದಲ್ಲಿ ಭಿನ್ನಮತೀಯ ಸಿದ್ಧಾಂತದ ಆಚಾರ್ಯರಿಂದ ಹೊಸ ಹೊಸ ಸುಧಾರಿತ ಮತಗಳು ಹುಟ್ಟಿಕೊಂಡವು. ಆದರೆ ಕಾಲಕ್ರಮೇಣ ಅವುಗಳಿಗೂ ಧರ್ಮಗ್ಲಾನಿ ಬಡಿದುಕೊಂಡು ಲೋಕೋದ್ಧಾರಕ್ಕೆ ಬದಲಾಗಿ ಲೋಕಕಂಟಕವೆನಿಸಿದವು. ಇದು ಧಾರ್ಮಿಕ ಇತಿಹಾಸ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books