ದೇವರ ಗೊಡವೆ ಕೂಡ ನನಗೆ ಬೇಡ

Author : ನ. ರವಿಕುಮಾರ್

Pages 88

₹ 50.00




Year of Publication: 2010
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ತೇಲುತಿದೆ ಅವಳು ಬರುವ ಸುದ್ದಿ
ಈ  ಮುಖ ಸುಮ್ಮನೆ ಅರಳಿ ಕುಳಿತಿದೆ
ಸುತ್ತಮುತ್ತಲಿನವರಲ್ಲಿ ಪಿಸುಮಾತು 
ರೋಗಿಯ ಆರೋಗ್ಯ ನಿನ್ನೆಗಿಂತ ಉತ್ತಮ!

ಅನುಭಾವಿ ಕವಿ ಮಿರ್ಜಾ ಗಾಲಿಬ್‌ ಮಾತ್ರ ಬರೆಯಲು ಸಾಧ್ಯವಾಗುವಂತಹ ಸಾಲುಗಳು ಇವು. ಮೊಘಲ್ ಕೊನೆಯ ಚಕ್ರವರ್ತಿ ಬಹಾದೂರ್‌ ಷಾ ಜಾಫರ್‌ ಸಮಕಾಲೀನನಾಗಿದ್ದ ಈತ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ. ಆತನ ಜೀವಿತ ಅವಧಿ ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಕಾಲಘಟ್ಟ. ಈತನ ಬಗ್ಗೆ ಜನಜನಿತವಾದ ಮಾತೊಂದಿದೆ: ’ಮೊಘಲರು ಭಾರತಕ್ಕೆ ನೀಡಿದ ಮುಖ್ಯ ಕೊಡುಗೆಗಳು ಮೂರು. ಅವು ಉರ್ದು, ತಾಜ್‌ಮಹಲ್‌ ಹಾಗೂ ಗಾಲಿಬ್!’

’ದೇವರ ಗೊಡವೆ ಕೂಡ ನನಗೆ ಬೇಡ’ ಕೃತಿಯ ನೆವದಲ್ಲಿ ಲೇಖಕ ನ. ರವಿಕುಮಾರ ಅವರು ಮಿರ್ಜಾ ಬಗೆಗೆ ದೊಡ್ಡ ಭಿತ್ತಿಯನ್ನೇ ಕಟ್ಟಿಕೊಟ್ಟಿದ್ದಾರೆ. ಆತನ ಬದುಕು ಬರಹದ ರಸಗವಳ ಕೃತಿಯಲ್ಲಿದೆ. 

About the Author

ನ. ರವಿಕುಮಾರ್
(02 February 1969)

ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ  500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ,  ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು.  ಕರ್ನಾಟಕ ಪ್ರಕಾಶಕರ ...

READ MORE

Related Books