ದೇವರ ವಿರಾಟ ರೂಪ

Author : ಯೋಗೇಶ್ ಮಾಸ್ಟರ್‌

Pages 356

₹ 250.00




Year of Publication: 2018
Published by: ಲಡಾಯಿ ಪ್ರಕಾಶನ

Synopsys

ಪುರಾಣದ ಆಟ - ವಾಸ್ತವದ ನೋಟ: ಪೌರಾಣಿಕ ವಿಷಯಗಳನ್ನು ಆಸ್ತಿಕರು ಇದ್ದಂತೆಯೇ ಸ್ವೀಕರಿಸುವುದನ್ನೂ, ನಾಸ್ತಿಕರು ಅವುಗಳನ್ನು ನೇರಾನೇರ ಖಂಡಿಸುವುದನ್ನೂ ಒಪ್ಪದ ಲೇಖಕರು ಇದರಲ್ಲಿ ಪೌರಾಣಿಕ ಅಂಶಗಳು ತಾತ್ವಿಕ, ಐತಿಹಾಸಿಕ, ಸಾಂಸ್ಕೃತಿಕ ವಿಷಯಗಳನ್ನು ಅನಾವರಣ ಮಾಡುತ್ತವೆ ಎಂದು ತಿಳಿಸುತ್ತಾರೆ. ಪುರಾಣದ ಒಗಟುಗಳನ್ನು ಬಿಡಿಸಲು ಯತ್ನಿಸುವುದು ಮಾನವಶಾಸ್ತದ ಅಧ್ಯಯನವೂ ಕೂಡ ಹೌದು. ಜೊತೆಗೆ ಮೌಢ್ಯ ಮತ್ತು ಶೋಷಣೆಗಳಿಂದ ಮುಕ್ತವಾಗುವಂತಹ ರೀತಿಯೂ ಹೌದು ಎಂದು ಉದಾಹರಣೆಗಳ ಸಮೇತ ವಿವರಿಸುತ್ತಾರೆ. 

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books