ದೇವರು ಸತ್ತ

Author : ವಸುದೇವ ಭೂಪಾಲಂ

Pages 176

₹ 200.00




Year of Publication: 2018
Published by: ಸಮೈಕ್ಯ ಪ್ರಕಾಶನ
Address: # 668, k-29, ಮೊದಲ ಮಹಡಿ, ಕಾಶೀಪತಿ ಅಗ್ರಹಾರ, ಕೆ.ಆರ್. ಮೊಹಲ್ಲ, ಮೈಸೂರು-570024
Phone: 9844212240

Synopsys

ಚಿಂತಕ, ಪ್ರಖರ ವಿಚಾರವಾದಿ ಡಾ. ವಸುದೇವ ಭೂಪಾಲಂ ಅವರು ಬರೆದ ಲೇಖನಗಳ ಕೃತಿ-ದೇವರು ಸತ್ತ. ದೇವರ ಅಸ್ತಿತ್ವವನ್ನು ಬಂಡವಾಳ ಮಾಡಿಕೊಂಡು ಬಡವರನ್ನು-ದಮನಿತರನ್ನು ಮತ್ತಷ್ಟು ಶೋಷಿಸುವ ಮಾರ್ಗವನ್ನಾಗಿಸಿಕೊಂಡ ಪುರೋಹಿತಶಾಹಿಯ ಹುನ್ನಾರವನ್ನು ಬಯಲಿಗೆಳೆಯಲು ಲೇಖಕ ವಸುದೇವ ಭೂಪಾಲಂ ಅವರು ದೇವರ ಚಟ್ಟ ಹೋರರಿ, ದೇವರು ಹುಟ್ಟಿದ್ದು ನಮ್ಮ ಕಲ್ಪನೆಯಲ್ಲಿ ...ಇಂತಹ ಹತ್ತು ಹಲವಾರು ಶೀರ್ಷಿಕೆಗಳ ಮೂಲಕ ಜನಮಾನಸದಲ್ಲಿ ವೈಚಾರಿಕತೆಯನ್ನು ಬೆಳೆಸುವ ಉದ್ದೇಶದೊಂದಿಗೆ ಬರೆದ ಲೇಖನಗಳ ಸಂಗ್ರಹವಿದು. ದೇವರು ಸತ್ತ ಎಂಬುದು ಮೂಲ ದೇವರ ಅಸ್ತಿತ್ವವವನ್ನೇ ನಿರ್ಲಕ್ಷಿಸುವ ವಿಚಾರವಂತೂ ಲೇಖಕರದ್ದಲ್ಲ. ಆದರೆ, ದೇವರ ಅಸ್ತಿತ್ವವನ್ನು ಬಳಸಿಕೊಂಡು ಶೋಷಿಸುವ ವರ್ಗದ ವಿರುದ್ಧ ಅವರು ಬಳಸಿದ ವೈಚಾರಿಕ ಅಸ್ತ್ರವಾಗಿದೆ. ಈ ಕೃತಿಯು, ಪುರೋಹಿತಶಾಹಿಯ ಹಾಗೂ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದು, ಹೊಸದಲ್ಲ. ಆದರೆ ಈ ಕೃತಿಯು ತನ್ನ ವೈಚಾರಿಕ ಗಟ್ಟಿತನದೊಂದಿಗೆ ಅಸಂಖ್ಯ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂಬುದು ಗಮನಾರ್ಹ.

About the Author

ವಸುದೇವ ಭೂಪಾಲಂ

`ದೇವರು ಸತ್ತ' ಕೃತಿಯ ಮೂಲಕ ತಮ್ಮ ಪ್ರಖರ ವೈಚಾರಿಕತೆಯ ವ್ಯಕ್ತಿತ್ವವನ್ನು ತೋರಿದ ವಸುದೇವ ಭೂಪಾಲಂ ಅವರು ಸಾಹಿತ್ಯದ ಇತರೆ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಸಿಡಿಲು, ಒಲವಿನ ಉಪವನ, ಆಳೌ ಕರ್ಣಾಟಕ ದೇವಿ, ಹೆಣ್ಣು (ಕಥೆ-ಕಾದಂಬರಿಗಳು), ತ್ರಿಶೂಲ, ಕಮ್ಮಟವಲ್ಲಭ ಹಾಗೂ ಕಾಲೇಜು ಹುಡುಗಿ (ನಾಟಕಗಳು), ಗೊಂಚಲ್ ಮಿಂಚು, ಸ್ವಾತಂತ್ಯ್ರವೀರರು (ಜೀವನ ಚರಿತ್ರೆ) ಹೊಸಹಾಡು, ಪ್ರಳಯ ದುಂದುಭಿ, ರಂಜನ (ಕವಿತೆಗಳು), ಹೂ, ಹಹಹ್ಹಾ, ಗುಮ್ಮ ಬಂತು (ಶಿಶುಗೀತೆಗಳು). ...

READ MORE

Related Books