ದೇವಸೂಗೂರಿನ ಶ್ರಿ ಸೂಗೂರೇಶ್ವರರು

Author : ರಾಜಶ್ರೀ ಕಿಶೋರ

Pages 498

₹ 500.00




Year of Publication: 2016
Published by: ರಮೇಶ ಅಜಗರಣಿ ವಿಜಯಲಕ್ಮ್ಷಿ
Address: ವೀರಭಧ್ರ ದೇವಸ್ಥಾನ ಹತ್ತಿರ , ರಾಯಚೂರು

Synopsys

ದೇವಸೂಗೂರಿನ ಶ್ರಿ ಸೂಗೂರೇಶ್ವರರು ರಾಜಶ್ರೀ ಕಿಶೋರ ಅವರ ಸಾಂಸ್ಕೃತಿಕ ಅಧ್ಯಯನವಾಗಿದೆ . ಸೂಗೂರೇಶ್ವರನನ್ನು ಕುರಿತು ರಚನೆಯಾದ ಪುರಾಣ, ಹಾಡು, ಮುಂತಾದವುಗಳನ್ನು ಲಿಖಿತ ಆಕರಗಳೆಂದು ಪರಿಭಾವಿಸಿಕೊಳ್ಳಲಾಗಿದೆ. ಅದೇ ರೀತಿ ಅಲಿಖಿತ ಸಾಹಿತ್ಯ ಸಂಗ್ರಹವನ್ನು ಮಾಡಲಾಗಿದೆ. ಈ ಆರನೇ ಅಧ್ಯಾಯವನ್ನು ನಿರೂಪಿಸುವಲ್ಲಿ ಸಂಶೋಧಕರ ಮಾಹಿತಿ ಸಂಗ್ರಹದ ಪರಿಶ್ರಮವನ್ನು ಮೆಚ್ಚಲೇಬೇಕು. ಸ್ವಲ್ಪ ಹೆಚ್ಚು ಕಡಿಮೆ ಕಲಬುರಗಿ ವಿಭಾಗದ ಬಹುತೇಕ ಸ್ಥಳಗಳನ್ನು ಹಾಗೂ ವಕ್ಷಗಳನ್ನು ಭೇಟಿಮಾಡಿ, ಸಂದರ್ಶಿಸಿ ಧ್ವನಿ ಸುರಳಿ ಮೂಲಕ ಸಂಗ್ರಹಿಸಿದ ಆಕರಗಳು ಸಂಪೂರ್ಣ ಕ್ಷೇತ್ರಕಾರ್ಯವನ್ನೇ ಅವಲಂಬಿಸಿರುವುದು ಇಲ್ಲಿಯ ಹೆಗ್ಗಳಿಕೆಯಾಗಿದೆ. ಅಧ್ಯಾಯ ಏಳರಲ್ಲಿ ಪವಾಡ ಹಾಗೂ ಐತಿಹ್ಯಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಪೌರಾಣಿಕ ಸಂಗತಿಗಳ ಒಳಗೆ ಚಾರಿತ್ರಿಕ ಅಂಶಗಳು ಸೇರಿಕೊಂಡಿರುತ್ತವೆ. ಅಂಥ ಚಾರಿತ್ರಿಕ ಸಂಗತಿಗಳನ್ನು ಪವಾಡಗಳ ಸಾಂಕೇತಿಕತೆಯ ನೆಲೆಯಲ್ಲಿ ನಿರೂಪಿಸುವ ಪ್ರಯತ್ನ ಮಾಡಿರುವುದು ಈ ಕೃತಿಯ ಇನ್ನೊಂದು ವಿಶೇಷವೆನ್ನಬಹುದು. ಒಂದು ಧಾರ್ಮಿಕ ಸಂಸ್ಥೆ ಜನಮಾನಸದಲ್ಲಿ ಪ್ರತೀತಿಗೆ ಬರಲು ಅಲ್ಲಿ ಕಾಯಕ ತತ್ವದಲ್ಲಿ ದುಡಿಯುವ ಸೇವಾ ಕಾರ್ಯ ಸಮಿತಿ ಮುಖ್ಯವಾಗಿರುತ್ತದೆ. ಸೇವಾ ಸಮಿತಿಯ ರಚನೆ-ಕರ್ತವ್ಯಗಳನ್ನು ಇಲ್ಲಿ ದಾಖಲಿಸಲಾಗಿದೆ. ಅನುಬಂಧದಲ್ಲಿ ಅಧ್ಯಯನಕ್ಕೆ ಪೂರಕವಾದ ಸೂಗೂರೇಶ್ವರನನ್ನು ಕುರಿತು ಸಾಹಿತ್ಯ, ಧ್ವನಿಸುರಳಿ, ಮೋಡಿ ಹಾಗೂ ಉರ್ದು ಭಾಷೆಯಲ್ಲಿ ರಚನೆಗೊಂಡ ದಾಖಲೆಗಳನ್ನು ವಕ್ಷ ವಿವರಗಳನ್ನು ನೀಡಲಾಗಿದೆ.ಒಟ್ಟಿನಲ್ಲಿ 12ನೇ ಶತಮಾನದ ಸಾಮಾಜಿಕ ನೇತಾರ ಹಾಗೂ ಶರಣ ಬದುಕನ್ನು ಬಾಳಿದ ದೇವಸೂಗೂರಿನ ಶ್ರೀ ಸೂಗೂರೇಶ್ವರನ್ನು ಕುರಿತು ಲಿಖಿತ ಹಾಗೂ ಮೌಖಿಕವಾಗಿ ಉಳಿದು ಕೊಂಡಿದ್ದ ಮಾಹಿತಿಯನ್ನು ಸೈದ್ಧಾಂತಿಕವಾಗಿ ಸಂಗ್ರಹಿಸಿ ವಿಶ್ಲೇಷಿಸಿ ನಿರೂಪಿಸುವುದರ ಮೂಲಕ ಉಪೇಕ್ಷಿತ ಶರಣನೊಬ್ಬನ ಚರಿತ್ರೆಯನ್ನು ದಾಖಲಿಸುವ ಪ್ರಯತ್ನಕ್ಕೆ ನನ್ನ ವಿದ್ಯಾರ್ಥಿನಿ ಡಾ|| ರಾಜಶ್ರೀ ಕಿಶೋರ ಅವರನ್ನು ಅಭಿನಂದಿಸುತ್ತೇನೆ. ಮುಂದೆಯೂ ಅವರಿಂದ ಉತ್ತಮ ಕೃತಿಗಳು ರಚನೆಯಾಗಲಿ ಎಂದು ಆಶಿಸುತ್ತೇನೆ. ಎಂದು ಎಂ.ಎಸ್‌.ಪಾಟೀಲ ವಿಶ್ರಾಂತ ಪ್ರಾಧ್ಯಾಪಕರು ಗುಲ್ಬರ್ಗಾ ವಿಶ್ವವಿದ್ಯಾಲಯ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಶ್ರೀ ಕಿಶೋರ

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...

READ MORE

Related Books