ಧರ್ಮ ಸಂರಕ್ಷಣೆ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 226

₹ 25.00




Year of Publication: 1989
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್
Address: ಜೀವನ ಕಾರ್ಯಾಲಯ ಟ್ರಸ್ಟ್ , ಬೆಂಗಳೂರು-560019

Synopsys

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದ ಕೃತಿ-ಧರ್ಮ ಸಂರಕ್ಷಣೆ. ಧರ್ಮ ಹಾಗೂ ಅದರ ವಿಸ್ತಾರ, ಆಳದ ವಿಷಯದಲ್ಲಿ ಕನ್ನಡಪ್ರಭ ದಿನಪತ್ರಿಕೆಗೆ ಬರೆದ ಚಿಂತನಗಳ ಸರಣಿಯೇ ಈ ಕೃತಿ. ಧರ್ಮದ ಗ್ಲಾನಿ, ಭರತ ವರ್ಷದ ಸಂಪ್ರದಾಯ, ಯಕ್ಷ ಪ್ರಶ್ನೆಯ ಸ್ಥಿತಿ, ಧರ್ಮದ ಮೂಲ, ಸನಾತನ ಧರ್ಮ, ಧರ್ಮದ ಬೆಳವಣಿಗೆ, ಪ್ರಕ್ಷೇಪಣೆ, ಸಂಕೇತಾರ್ಥ, ಕೃಷ್ಣಾವತಾರದ ಕಥೆ, ಮೂಲದ ಕವಿಯ ದೃಷ್ಟಿ, ದೇವರನ್ನು ಕುರಿತ ಭಾವಗಳ ಮಧ್ಯೆ ಸ್ಪರ್ಧೆ, ಕ್ಷೇತ್ರಗಳ ಕಥೆಗಳು, ಕ್ಷೇತ್ರಗಳ ಸಂಪ್ರದಾಯಗಳು, ಕ್ಷೇತ್ರಗಳ ಮಹಾತ್ಮೆ, ಆಂಗ್ಲರ ಭೇದೋಪಾಯ, ನಮ್ಮ ಹರಿಜನರ ಸಮಸ್ಯೆ ಇತ್ಯಾದಿ ವಿದ್ವತ್ ಪೂರ್ಣ ಚಿಂತನೆಗಳು ಇಲ್ಲಿ ಸಂಕಲನಗೊಂಡಿವೆ.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books