ಧಾರವಾಡ ತಾಲೂಕಿನ ಶಾಸನಗಳು

Author : ಎಂ.ಎಂ. ಕಲಬುರ್ಗಿ

Pages 250

₹ 20.00




Year of Publication: 1975
Published by: ಪ್ರಸಾರಾಂಗ
Address: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Synopsys

ಧಾರವಾಡ ತಾಲೂಕಿನ 74 ಶಾಸನಗಳ ಪಟ್ಟಿಯನ್ನು ಒದಗಿಸುತ್ತದೆ ಈ ಕೃತಿ. ಶಾಸನಗಳಲ್ಲಿ ಅರ್ಧದಷ್ಟು ಈ ಕೃತಿಯ ಮೂಲಕ ಮೊದಲ ಬಾರಿಗೆ ಪ್ರಕಟಗೊಂಡವು ಎಂಬುದು ಗ್ರಂಥದ ಮಹತ್ವವನ್ನು ಸಾರುತ್ತದೆ. ಶಾಸನಗಳನ್ನು ಆಳ್ವಿಕೆ ನಡೆಸಿದವರ ಹಿನ್ನೆಲೆಯಿಂದ, ಬ್ರಾಹ್ಮಣ, ಶೈವ, ವೀರಶೈವ ಧರ್ಮಗಳ ದೃಷ್ಟಿಯಿಂದ ಹಾಗೂ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳ ನೆಲೆಗಟ್ಟಿನಲ್ಲಿಯೂ ಅಧ್ಯಯನ ನಡೆಸಲಾಗಿದೆ. ಕನ್ನಡೇತರರೂ ಅರ್ಥ ಮಾಡಿಕೊಳ್ಳುವಂತೆ ಕಲಬುರ್ಗಿ ಅವರು ರೋಮ್‌, ಇಂಗ್ಲಿಷ್‌ ಭಾಷೆಗಳನ್ನು ಕೃತಿಯಲ್ಲಿ ದುಡಿಸಿಕೊಂಡಿದ್ದಾರೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books