ಧೀಮಂತರು

Author : ಎಚ್.ಎ. ಪಾರ್ಶ್ವನಾಥ್‌

Pages 492

₹ 500.00




Year of Publication: 2022
Published by: ರೂಪ ಪ್ರಕಾಶನ
Address: ರಾಜಾಕುಮಾರ್ ರಸ್ತೆ, ಜೆಎಸ್‌ಎಸ್‌ ಲೇಔಟ್‌, ಮೈಸೂರು 570011

Synopsys

ಪಾರ್ಶ್ವನಾಥರು ವ್ಯಕ್ತಿಚಿತ್ರಣ ರೇಖಿಸುವಲ್ಲಿ ಸಿದ್ಧಹಸ್ತರು. ಈ ನಿಟ್ಟಿನಲ್ಲಿ 'ವ್ಯಕ್ತಿ' 'ಶಕ್ತಿ', 'ನಮ್ಮ ನಿಮ್ಮವರು', 'ಹೆಚ್.ಕೆ. ಯೋಗಾನರಸಿಂಹ, 'ವಿ' ರಾಮಮೂರ್ತಿ ಎಂಬ ಗ್ರಂಥಗಳು ಪ್ರಕಟವಾಗಿವೆ. ಪ್ರಸ್ತುತ 'ಧೀಮಂತರು' ಇದೇ ಪ್ರಕಾರಕ್ಕೆ ಸೇರುವ ಕೃಷಿಯಾಗಿದೆ. ಇದರಲ್ಲಿ 40 ವ್ಯಕ್ತಿಗಳ ಚಿತ್ರಣವಿದೆ. ಈ ವ್ಯಕ್ತಿಗಳು ಸಾಹಿತ್ಯ, ಧಾರ್ಮಿಕ, ರಂಗಭೂಮಿ, ಜಾನಪದ, ವೈದ್ಯಕೀಯ, ಸಂಘಟನೆ, ಪತ್ರಿಕಾರಂಗ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವ ರಾಗಿದ್ದಾರೆ. ಡಾ. ಪಾರ್ಶ್ವನಾಥರು ಪ್ರತಿಯೊಬ್ಬ ವ್ಯಕ್ತಿಯ ಸಾಧನೆ ಮತ್ತು ವೈಶಿಷ್ಟ್ಯಗಳನ್ನು ತುಂಬ ಆಪ್ತವಾಗಿ, ಲಲಿತವಾದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಓದುಗರನ್ನು ಸೆಳೆಯುವಲ್ಲಿ ಕೃತಿ ಯಶಸ್ವಿಯಾಗಿದೆ. ಇಲ್ಲಿನ ಲೇಖನಗಳು ವ್ಯಕ್ತಿಗತ ಸಾಧನೆಯ ಜೊತೆಗೆ, ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಆಯಾ ಕ್ಷೇತ್ರದಲ್ಲಿ ನಡೆದಂಥ ಕಾರ್ಯಗಳನ್ನೂ ಸಾಂದರ್ಭಿಕ ವಾಗಿ ದಾಖಲಿಸುವುದರಿಂದ ಇಲ್ಲಿನ ಮಾಹಿತಿಗಳು ಸಂಶೋಧಕರಿಗೂ ಉಪಯುಕ್ತವಾಗಬಲ್ಲವು. ಡಾ. ಪಾರ್ಶ್ವನಾಥರು ಮಾತಿನ ಮೋಡಿಗಾರರು, 'ಧೀಮಂತರು' ಕೃತಿ ಕೂಡ ತನ್ನ ಮೋಹಕ ನಿರೂಪಣೆಯಿಂದ ಕನ್ನಡಿಗರಿಗೆ ಆಪ್ಯಾಯಮಾನವಾಗಬಲ್ಲುದು ಎಂದು ಡಾ. ವೈ.ಸಿ. ಭಾನುಮತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಚ್.ಎ. ಪಾರ್ಶ್ವನಾಥ್‌

ಸಾಹಿತಿ, ಹವ್ಯಾಸಿ ಪತ್ರಕರ್ತರಾಗಿರುವ ಎಚ್.ಎ. ಪಾರ್ಶ್ವನಾಥರು ಜನಿಸಿದ್ದು 1947 ಜುಲೈ 7ರಂದು. ತಂದೆ ಎಚ್.ಡಿ. ಅನಂತರಾಮಯ್ಯ, ತಾಯಿ ಪ್ರಭಾವತಮ್ಮ. ಧಾರವಾಡದ ಎಸ್.ಡಿ.ಎಂ. ಕಾಲೇಜಿನ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಪಕರಾಗೊ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಕಾಲೇಜು ದಿನಗಳಿಂದಲೇ ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಿಮದ ನಾಟಕದಲ್ಲಿಡಿಪ್ಲೊಮಾ ಪದವಿ ಪಡೆದರು. ರಂಗನಟನಾಗಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.  ಕೈಲಾಸಂ ಶತಮಾನೋತ್ಸವ, ರಂಗ ಸಂಗೀತ, ಬಳ್ಳಾರಿ ಜಿಲ್ಲಾ ರಂಗಭೂಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಇವರಿಗೆ ಹೊಯ್ಸಳ ಪ್ರಶಸ್ತಿ, ಬೆಂಗಳೂರಿನ ಚೇತನ ಪ್ರಶಸ್ತಿ, ಜ್ಞಾನ ಸಾಗರ ಪ್ರಶಸ್ತಿ, ಕೊಪ್ಪಳದ ಸಿದ್ಧಯ್ಯ ಪುರಾಣಿಕ ಪ್ರಶಸ್ತಿ, ...

READ MORE

Related Books