ಧ್ಯಾನ

Author : ಶ್ರೀ ಎಂ

Pages 175

₹ 350.00




Year of Publication: 2022
Published by: ಮೆಜೆಂತಾ ಪ್ರೆಸ್

Synopsys

ಶ್ರೀ ಎಂ ಅವರ ಕೃತಿ ʻಧ್ಯಾನ: ಆನಂತ ಆನಂದ ಹಾಗೂ ಆತ್ಮಶಕ್ತಿಯ ಶೋಧನೆಗಾಗಿʼ. ಧ್ಯಾನದ ಮಹತ್ವದ ಬಗೆಗಿನ ಹಲವಾರು ವಿಚಾರಗಳನ್ನು ಹೇಳುತ್ತದೆ. ಪ್ರಸ್ತುತ ಪುಸ್ತಕ ಆಧುನಿಕ ಕಾಲಘಟ್ಟದ ಬದಲಾದ ಜೀವನ ಶೈಲಿಯಿಂದ ಮನಸ್ಸು ಹಾಗೂ ದೇಹವನ್ನು ಆರೋಗ್ಯಪೂರ್ಣವಾಗಿರಿಸಲು ಧ್ಯಾನ ಪ್ರಯೋಜನಕಾರಿ. ದಿನನಿತ್ಯದ ಧ್ಯಾನದಿಂದ ವ್ಯಕ್ತಿಯಲ್ಲಿ ಆಗುವ ಪ್ರಯೋಜನಗಳು, ಅದು ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಓದುಗರಿಗೆ ಮಾಹಿತಿನೀಡುವ ಕೈಪಿಡಿಯಾಗಿ ಇದನ್ನು ಕಾಣಬಹುದು. ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನೂ ಸಮತಲದಲ್ಲಿಡಲು ಯೋಗ, ಧ್ಯಾನವನ್ನು ಅನುಸರಿಸುವವರಿಗೆ ಹಾಗೂ ಯೋಗದ ಕುರಿತಾದ ಸಂತಗತಿಗಳನ್ನು ತಿಳಿಯ ಬಯಸುವವರಿಗೆ ಶ್ರೀ ಎಂ ಅವರು ಎಲ್ಲಾ ಮಾಹಿತಿಗಳನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ.

About the Author

ಶ್ರೀ ಎಂ

ಶ್ರೀ ಎಂ ಅವರು ಮಹಾವತಾರ್ ಬಾಬಾಜಿ ಅವರ ಶಿಷ್ಯರಾಗಿದ್ದ ಶ್ರೀ ಮಹೇಶ್ವರನಾಥ ಬಾಬಾಜಿಯವರ ಶಿಷ್ಯ . ಇವರ ಪೂರ್ಣ ಹೆಸರು ಶ್ರೀ ಮಧುಕರ್ನಾಥ್ ಜಿ. ಯೋಗಿಯಾದ ಇವರು ಹಿಂದೂ ಧರ್ಮದ ನಾಥ ಉಪ-ಸಂಪ್ರದಾಯದ ದೀಕ್ಷೆಯನ್ನು ಹೊಂದಿದ್ದಾರೆ. ಪುಸ್ತಕದ ಬಗ್ಗೆ ಅತಿಯಾದ ಮೋಹವನ್ನು ಹೊಂದಿರುವ ಶ್ರೀ ಎಂ ಅವರು ಈಗಾಗಲೇ ಆಂಗ್ಲಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಅವರು ಬರೆದಿರುವ ಕೆಲವೊಂದು ಪುಸ್ತಕಗಳು ಕನ್ನಡಕ್ಕೆ ಅನುವಾದವಾಗಿವೆ. ಇನ್ನು, 2020ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದ ಹೆಮ್ಮೆ ಇವರದು. ಪ್ರಸ್ತುತ ಶ್ರೀ ಎಂ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನೆಲೆಸಿದ್ದಾರೆ.  ...

READ MORE

Related Books