ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ

Author : ಸಿಬಂತಿ ಪದ್ಮನಾಭ ಕೆ.ವಿ

₹ 200.00




Year of Publication: 2020
Published by: ಸಾಧನ ಪಬ್ಲಿಕೇಷನ್
Address: ನಂ.15/16, ಶಿವಕಾಂಪ್ಲೆಕ್ಸ್, ಡಾ.ರಾಜ್ ಪ್ರತಿಮೆ ಎದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು- 53

Synopsys

‘ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ’ ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖನ ಸಂಕಲನ. ಪತ್ರಿಕೆ, ರೇಡಿಯೋ, ಟಿವಿ ಎಂಬಿತ್ಯಾದಿ ಮಾಧ್ಯಮ ವರ್ಗೀಕರಣದ ಕಾಲ ಮುಗಿದು ನಾವೀಗ ಡಿಜಿಟಲ್ ಯುಗಕ್ಕೆ ಬಂದು ನಿಂತಿದ್ದೇವೆ. ಮೊಬೈಲ್ ಎಂಬ ಅಂಗೈ ಅರಮನೆಯೊಳಗೆ ಎಲ್ಲಾ ಮಾಧ್ಯಮಗಳೂ ಸಂಗಮಿಸಿವೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಒಟ್ಟು ಸ್ವರೂಪ, ಬಳಕೆ, ಕಾರ್ಯನಿರ್ವಹಣೆ, ವ್ಯವಹಾರ ಬದಲಾಗಿರುವಂತೆ ಅವುಗಳ ಕಡೆಗೆ ನಾವು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ. ಈ ಪುಸ್ತಕ ಅಂತಹದ್ದೊಂದು ಹೊಸ ದೃಷ್ಟಿಯನ್ನು ಅನಾವರಣಗೊಳಿಸಿದೆ.

ಸ್ಮಾರ್ಟ್ ಫೋನ್ ಕಾಲದ ಮಾಧ್ಯಮರಂಗದ ಸವಾಲುಗಳೇನು, ಡಿಜಿಟಲ್ ವೈಭವದ ನಡುವೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯ ಉಳಿದಿದೆಯೇ, ರೋಬೋಟ್ ಪತ್ರಕರ್ತರು ಹುಟ್ಟಿಕೊಂಡರೆ ಏನಾಗಬಹುದು, ಮಾಹಿತಿಯ ಅತಿಸಾರದಿಂದ ಆಗಬಹುದಾದ ಅನಾಹುತಗಳೇನು, ಈ ಮಾಯಾಲೋಕದಲ್ಲಿ ಪರಿಸರ, ಕೃಷಿ, ಮಹಿಳೆ, ಭಾಷೆ, ವಸ್ತುನಿಷ್ಠತೆ, ನೈತಿಕತೆಗಳ ಸ್ಥಾನಮಾನ ಏನು ಮುಂತಾದ  ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗಂಭೀರ ಪ್ರಯತ್ನ ಈ ಕೃತಿಯಲ್ಲಿದೆ.

About the Author

ಸಿಬಂತಿ ಪದ್ಮನಾಭ ಕೆ.ವಿ

ಸಿಬಂತಿ ಪದ್ಮನಾಭ ಕೆ. ವಿ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದವರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ , ಆನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯೊಂದಿದ್ದು ಫೆಲೋಶಿಪ್‌ಗೆ ಆಯ್ಕೆಯಾಗಿ,  'ವಿಜಯ್ ಟೈಮ್' ಹಾಗೂ 'ಡೆಕ್ಕನ್ ಹೆರಾಲ್ಡ್' ದೈನಿಕಗಳಲ್ಲಿ ಪತ್ರಕರ್ತರಾಗಿದ್ದರು.   ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯಕ್ಷಗಾನ, ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಪೊರೆ ಕಳಚಿದ ಮೇಲೆ', 'ತುಮಕೂರು ಜಿಲ್ಲೆಯ ...

READ MORE

Conversation

Related Books