ಡೈರೆಕ್ಟರ್‍ಸ್ ಸ್ಪೆಷಲ್

Author : ಗುರುಪ್ರಸಾದ್‌

Pages 178

₹ 200.00




Year of Publication: 2011
Published by: ತಾಯಿ ಶಾರದೆ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ-ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರ ಕೃತಿ-ಡೈರೆಕ್ಟರ್‍ಸ್ ಸ್ಪೆಷಲ್. ಈ ಕೃತಿಯಲ್ಲಿ ಒಟ್ಟು 18 ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಬದುಕಿನ ವಾಸ್ತವಿಕ ಚಿತ್ರಣಗಳಾಗಿವೆ. ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಬರಹಕ್ಕಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ಸಂದರ್ಶನವೂ ಇದೆ. ಆಕರ್ಷಕ ಶೈಲಿಯಿಂದಾಗಿ ಎಲ್ಲ ಬರಹಗಳು ಓದಿಸಿಕೊಂಡು ಹೋಗುತ್ತವೆ. ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ.

About the Author

ಗುರುಪ್ರಸಾದ್‌

ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುಪ್ರಸಾದ್ ಅವರು ಉತ್ತಮ ಸಾಹಿತಿ, ಚಿತ್ರ ಸಾಹಿತಿಯೂ ಹೌದು. ಇವರು 1972 ನವೆಂಬರ್‌ 02ರಂದು ಕನಕಪುರದಲ್ಲಿ ಜನಿಸಿದರು. ನವಿರು, ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಇವರು ಸಿದ್ಧಹಸ್ತರು. 2006ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿ ಪಯಣ ಆರಂಭಿಸಿದರು. ಇವರ ‘ಎದ್ದೇಳು ಮಂಜುನಾಥ’ ಪುಸ್ತಕವು ಸಿನಿಮಾ ಸಾಹಿತ್ಯಕ್ಕೆ ಒಗ್ಗಿದ್ದು ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುತ್ತವೆ. ನಂತರ ಇದೇ ಶೀರ್ಷಿಕೆಯಲ್ಲಿ ಚಿತ್ರಿಸಿದ `ಎದ್ದೇಳು ಮಂಜುನಾಥ' ತನ್ನ ವಿಭಿನ್ನ ನಿರೂಪಣೆ, ಲವಲವಿಕೆಯ ಕತೆ ಹೇಳುವಿಕೆಯ ...

READ MORE

Related Books