ದಿವ್ಯ ಸುಳಿ

Author : ಕೆ.ಎನ್. ಗಣೇಶಯ್ಯ

Pages 282

₹ 330.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080- 2661 7100

Synopsys

‘ದಿವ್ಯ ಸುಳಿ’ ವಿಜ್ಞಾನ, ಸಾಹಿತ್ಯ ಯಾನದ ಸುಳಿಯಲ್ಲಿ ಖ್ಯಾತ ಲೇಖಕ ಡಾ. ಕೆ.ಎನ್. ಗಣೇಶಯ್ಯ ಅವರ ಲೇಖನಗಳ ಸಂಕಲನ. ಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ. ಅದರಲ್ಲಿನ ಜೀವ ಪ್ರಪಂಚವೇ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಾಕಾರಗಳು, ಹಾಗೆಯೇ ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ ಅವು ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟುಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ.

ಜೀವ ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ ದಿವ್ಯಸುಳಿಗಳ ಪರಿಚಯವನ್ನು ಆ ಪಯಣದ ಹೆಜ್ಜೆಗಳನ್ನೂ ಈ ಹೊತ್ತಿಗೆ ತೆರೆದಿಡುತ್ತದೆ.

ಅವರೇ ಹೇಳುವ ಹಾಗೆ, ಈ ಹೊತ್ತಿಗೆಯಲ್ಲಿ - ಪುರಾವೆಗಳನ್ನಾಧರಿಸಿದ ವೈಚಾರಿಕ ವಿಷಯಗಳಿಂದ ಕೇವಲ ತರ್ಕಗಳನ್ನೇ ಆಧರಿಸುವ ಶೋಧಗಳವರೆಗೆ ವೈವಿಧ್ಯಮಯ ವಸ್ತುಗಳ ನಡುವಿನ ಪ್ರಯಾಣವಿದೆ. ವಿಜ್ಞಾನ ಚರಿತ್ರೆ ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆ-ಕಾದಂಬರಿ ಹೆಣೆಯುವ ಡಾ.ಕೆ.ಎನ್.ಗಣೇಶಯ್ಯ,  ದಿವ್ಯಸುಳಿಯಲ್ಲಿ ಅವೆಲ್ಲ ವಿಷಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ. ಪ್ರಕೃತಿಯಲ್ಲಿ ಸ್ವಯಂ ಸಂರಚನೆ, ಅಸಮಾನತೆ, ಈ ಕಾಯಿ ಈ ಬೀಜ ಹೀಗೇಕೆ?, ಏಳು ಸ್ವರಗಳು, ಚರಿತ್ರೆ ಮತ್ತು ವಿಜ್ಞಾನ, ಒಂದು ಪವಾಡದ ಚರಿತ್ರೆ, ಚರಿತ್ರೆಯ ಕೆಲವು ಪ್ರತೀತಿಗಳು, ಪುರಾಣ ಪ್ರವೇಶ, ಸೋತ ಧರ್ಮ, ಗೆಲ್ಲದ ವಿಜ್ಞಾನ ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books