ಡೊಂಗರಗಾಂವ ದರ್ಶನ

Author : ಸಂಗಪ್ಪ ಆರ್. ಚಿಕ್ಕಗೌಡ (ಚಿಗ್ಗೋಣ)

Pages 115

₹ 100.00




Year of Publication: 2017
Published by: ಸರಸ್ವತಿ ಪ್ರಕಾಶನ
Address: ಡೊಂಗರಗಾಂವ, ತಾಲೂಕು ಕಮಲಾಪುರ, ಜಿಲ್ಲೆ: ಕಲಬುರಗಿ

Synopsys

ಲೇಖಕ ಸಂಗಪ್ಪಆರ್. ಚಿಕ್ಕಗೌಡ (ಚಿಗ್ಗೋಣ) ಅವರ ಕೃತಿ-ಡೊಂಗರಗಾಂವ ದರ್ಶನ. ಸುಮಾರು ಎರಡು ಶತಮಾನಗಳ ಡೊಂಗರಗಾಂವ  ಗ್ರಾಮದ ಇತಿಹಾಸ ತಿಳಿಸುತ್ತದೆ. ಈ ಕೃತಿಯಲ್ಲಿ ಲೇಖಕರು ಗ್ರಾಮದ ಇತಿಹಾಸವನ್ನು ನಾಲ್ಕು ಘಟ್ಟಗಳಾಗಿ ವಿoಗಡಿಸಿದ್ದಾರೆ. ಮೊದಲನೇ ಘಟ್ಟದಲ್ಲಿ ಸ್ವತಂತ್ರಪೂರ್ವ ಗ್ರಾಮದ ಇತಿಹಾಸವಿದೆ.ಊರಲ್ಲಿರುವ ಜನರು, ಮನೆಗಳು,ರಸ್ತೆ,ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವಾಲಯಗಳ ಪಾತ್ರ,ಭಕ್ತಿ ಭಾವದಿಂದ ಕೂಡಿದ ಜನರ ಭಾವನೆ,ದೇವರ ಮೇಲೆ ನಂಬಿಕೆ,ಜಾತಿಪದ್ಧತಿ, ಕೆಲವು ಹಿರಿಯರ ಹೆಸರುಗಳು ಹಾಗೂ ಮನೆತನದ ಹೆಸರುಗಳು ಕೂಡ ಬಂದಿವೆ. ಅಂದಿನ ಕಸುಬುದಾರರ ಸಂಪೂರ್ಣ ಮಾಹಿತಿ ಇದೆ. ರೈತರಿಗೂ ಹಾಗೂ ಕಸುಬುದಾರರಿಗೂ ಹಣದ ವ್ಯವಹಾರವೇ ಇದ್ದಿಲ್ಲ.ರೈತರು ಬೆಳೆದ ಧಾನ್ಯಗಳನ್ನು ಕಸುಬುದಾರರಿಗೆ ಅವರು ಮಾಡಿದ ಕೆಲಸಕ್ಕೆ ಪರ್ಯಾಯವಾಗಿ ಸಂದಾಯ ಮಾಡುತ್ತಿದ್ದರು. ಅತಿವೃಷ್ಟಿ ಹಾಗೂ ಅನಾವೃಷ್ಟಿ ಗಳಿಂದಾಗಿ ಆಗಿರುವ ತೊಂದರೆಗಳನ್ನು ನಮೂದಿಸಿದ್ದಾರೆ. ಅಂದಿನ ಶಿಕ್ಷಣ ವ್ಯವಸ್ಥೆ, ಆರೋಗ್ಯ, ಆಯುರ್ವೇದ ಪದ್ಧತಿ , ನಾಟಿವೈದ್ಯರ ವಿವರವೂ ಇದೆ.  ಜೈನರು ಹಾಗೂ ರೆಡ್ಡಿ ಜನಾಂಗದವರಿದ್ದು, ಭೀಮೇಶ್ವರ ದೇವಾಲಯ,ಮಲ್ಲಿಕಾರ್ಜುನ ದೇವಾಲಯ,ಮತ್ತಮುತ್ಯನ ದರ್ಗಾ, ಹಾಗೂ ಊರ ಸೀಮೆಯ ಲಿಂಗದ ಗುಡಿ ಇವು ಸಂಶೋಧನೆಗೆ ಅರ್ಹವಾಗಿವೆ. ಹೀಗೆ ಪುರಾತನ ಗುಡಿ ಗುಂಡಾರಗಳು, ಮಠಗಳು, ಸಂಶೋಧನೆಗೋಳಗಾದ ಗ್ರಾಮದ ಇತಿಹಾಸ ನಿಚ್ಚಳವಾಗಿ ತಿಳಿಯಬಹುದು.  ಮುಂಬರುವ ಜನಾಂಗಕ್ಕೆ ಈ ಪುಸ್ತಕ ಗ್ರಾಮದ ಇತಿಹಾಸ ತಿಳಿಯುವಲ್ಲಿ ಸಹಕಾರಿಯಾಗಿದೆ.

About the Author

ಸಂಗಪ್ಪ ಆರ್. ಚಿಕ್ಕಗೌಡ (ಚಿಗ್ಗೋಣ)
(21 September 1943)

ಲೇಖಕ ಸಂಗಪ್ಪಆರ್ ಚಿಕ್ಕಗೌಡ ( ಚಿಗ್ಗೋಣ)  ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾ;ಲೂಕಿನ ಡೊಂಗರಗಾಂವ ಗ್ರಾಮದವರು. ತಂದೆ ರಾಚಪ್ಪ ಚಿಕ್ಕಗೌಡ, ತಾಯಿ ಸಂಗಮ್ಮ. ಪ್ರೌಢಶಾಲೆಯ ನಿವೃತ್ತ (2001) ಶಿಕ್ಷಕರು. ಕೃತಿಗಳು: ಡೊಂಗರಗಾಂವ ದರ್ಶನ (ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಹಾಗೂ ನಂತರದಲ್ಲಿ ರಜಾಕಾರರ ಹಾವಳಿಯನ್ನು ಎದುರಿಸಿದ ಪ್ರಸಂಗಗಳ ಬರಹ ಕೃತಿ) ...

READ MORE

Related Books