ಡಾ. ಅಂಬೇಡ್ಕರ್ ಜೊತೆಗಿನ ಅನುಭವಗಳು

Author : ಎನ್.ಆರ್. ಶಿವರಾಂ

₹ 2400.00




Year of Publication: 2019
Published by: ಅಶೋಕ್ ಪಬ್ಲಿಕೇಶನ್ಸ್

Synopsys

ಎನ್.ಆರ್. ಶಿವರಾಂ ಅವರು ಅಂಬೇಡ್ಕರ್ ಅವರ ಬಗೆಗೆ ಬರೆದ ಲೇಖನ ಸಂಗ್ರಹ ಡಾ. ಅಂಬೇಡ್ಕರ್ ಜೊತೆಗಿನ ಅನುಭವಗಳು. ಕೃತಿಯಲ್ಲಿ ಬೆನ್ನುಡಿಯಲ್ಲಿ ಲೇಖಕರು ಹೇಳಿರುವಂತೆ, ಗೌತಮ ಬುದ್ಧ ಗುರುವಿಗೆ ತನ್ನ ಆಪ್ತ ಶಿಷ್ಯ ' ಆನಂದ ' ಹೇಗೋ ಅದೇ ರೀತಿ ಡಾ . ಬಾಬಾಸಾಹೇಬ್ ಅಂಬೇಡ್ಕರ್‌ ಅವರಿಗೆ ತನ್ನ ಆಪ್ತ ಸಹಾಯಕ ' ನಾನಕ್‌ಚಂದ್ ರತ್ತು ' ಆಗಿದ್ದರು . ನಾನಕ್ ಚಂದ್ ರತ್ತು ಬಾಬಾಸಾಹೇಬರು ಸಂತಸಪಟ್ಟ , ಸಂಕಟಪಟ್ಟ , ಕೋಪಗೊಂಡ , ಮೌನಿಯಾದ , ಕಣ್ಣೀರು ಸುರಿಸಿದ ಕ್ಷಣಗಳನ್ನು ಹತ್ತಿರದಿಂದ ನೋಡಿದ್ದ ಒಡನಾಡಿಯಾಗಿದ್ದರು . ಒಂದರ್ಥದಲ್ಲಿ ರತ್ತುರವರು ಬಾಬಾಸಾಹೇಬರ ನೆರಳಿನಂತಿದ್ದರು . ಅತ್ಯಂತ ನಿಷ್ಟುರ ಮತ್ತು ಕಠಿಣ ವ್ಯಕ್ತಿಯಾಗಿದ್ದ ಬಾಬಾಸಾಹೇಬರಿಗೆ ದೀರ್ಘಕಾಲ ಸಹಾಯಕರಾಗಿ ಕೆಲಸ ಮಾಡುವುದೆಂದರೆ ಯಾರೊಬ್ಬರೂ ಊಹಿಸಬಹುದಾದಷ್ಟು ಸುಲಭವಾಗಿರಲಿಲ್ಲ . ಆದರೆ ರತ್ತುರವರು ತನ್ನ ವೈಯಕ್ತಿಕ ಜೀವನ , ಸುಖ , ಸಂತೋಷಗಳನ್ನು ತ್ಯಾಗ ಮಾಡಿ 17 ವರ್ಷಗಳ ಕಾಲ ಸತತವಾಗಿ ( ಬಾಬಾಸಾಹೇಬರಿಂದ ಒಂದೇ ಒಂದು ರೂಪಾಯಿ ಸಂಬಳವನ್ನು ಪಡೆಯದೆ ) ಅತ್ಯಂತ ತಾಳ್ಮೆಯಿಂದ ಅಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಬಾಬಾಸಾಹೇಬರ ಸೇವೆ ಮಾಡಿದ್ದಾರೆ . ನಿಜವಾಗಿಯೂ ನಾನಕ್ ಚಂದ್ ರತ್ತು ತನ್ನ ಬದುಕನ್ನೇ ಬಾಬಾಸಾಹೇಬರ ಸೇವೆಗಾಗಿ ಸಮರ್ಪಿಸಿಕೊಂಡಿದ್ದರು . ಉದಾತ್ತ ಧೈಯ ಸಾಧನೆಗಾಗಿ ಬದುಕಿರುವ ಮೇರು ವ್ಯಕ್ತಿಗಳ ಸೇವೆ ಮಾಡುತ್ತಾ ಅವರ ಸಂಗದಲ್ಲಿರುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಮತ್ತು ಅದು ಅಷ್ಟು ಸುಲಭವೂ ಅಲ್ಲ . ಅದಕ್ಕಾಗಿ ದೃಢಸಂಕಲ್ಪ , ಕಠಿಣ ಪರಿಶ್ರಮ ಮತ್ತು ತ್ಯಾಗಮನೋಭಾವ ಬೇಕಾಗುತ್ತದೆ . ಈ ಅವಕಾಶವನ್ನು ರತ್ತುರವರು ತನ್ನ ಕಠಿಣ ಪರಿಶ್ರಮದಿಂದ ಗಳಿಸಿಕೊಂಡಿದ್ದರು . ಈ ಕುರಿತು ಪಶ್ಚಿಮ ಬಂಗಾಳದ ಖ್ಯಾತ ಇತಿಹಾಸಕಾರರಾದ ಡಾ . ಆರ್.ಎಲ್ , ಬಿಸ್ವಾಸ್‌ರವರು 1965 ರಲ್ಲಿ ರತ್ತುರವರಿಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾರೆ . ' ' ನಿಜವಾದ ಯುಗಪ್ರವರ್ತಕ ಡಾ . ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ದೀರ್ಘ ಕಾಲ ಹತ್ತಿರದಿಂದ ನೋಡಿದ್ದ ನಿಮ್ಮ ಕಣ್ಣುಗಳೇ ಶ್ರೇಷ್ಠ , ಬಾಬಾಸಾಹೇಬರ ವಾತ್ಸಲ್ಯಭರಿತ ಕೈಗಳಿಂದ ಸ್ಪರ್ಶಿಸಿಕೊಂಡ ನಿಮ್ಮ ದೇಹವೇ ಪವಿತ್ರ ಬಾಬಾಸಾಹೇಬರ ಸೇವೆ ಮಾಡುತ್ತ ಅವರ ಸನಿಹದಲ್ಲಿದ್ದ ನೀವೇ ಧನ್ಯ . ಮುಂದಿನ ಪೀಳಿಗೆ ಖಂಡಿತವಾಗಿಯೂ ಬಾಬಾಸಾಹೇಬರಿಗೆ ನೀವು ಸಲ್ಲಿಸಿದ್ದ ಸೇವೆಯನ್ನು ನೆನೆಯುತ್ತಾ ನಿಮಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತಾ ನಿಮ್ಮನ್ನು ಸ್ಮರಿಸುತ್ತದೆ ಎಂದಿದ್ದಾರೆ.

About the Author

ಎನ್.ಆರ್. ಶಿವರಾಂ

ಪ್ರೊ. ಎನ್.ಆರ್. ಶಿವರಾಂ ಅವರು ಚಿಂತಕರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕದಿರಹಳ್ಳಿಯವರು. ತಂದೆ ಆರ್. ರಾಮಯ್ಯ, ತಾಯಿ ಗಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಗಣಿತ) ಪದವೀಧರರು. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಡಾ. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ.  ಕೃತಿಗಳು: ಅಂಬೇಡ್ಕರ್ ಥಾಟ್ಸ್, ಪುಸ್ತಕ ಪ್ರೇಮಿ ಡಾ. ಅಂಬೇಡ್ಕರ್. ...

READ MORE

Related Books