ಡಾ. ಅಂಬೇಡ್ಕರ ವಂಶವೃಕ್ಷ

Author : ಗಂಗಾರಾಂ ಚಂಡಾಳ

Pages 68

₹ 40.00




Year of Publication: 2018
Published by: ಬೆಳಕು ಸಮಾಜ ಪ್ರಕಾಶನ
Address: # 29, ಮಂಗಳ ರಸ್ತೆ, 2ನೇ ಹಂತ, ಕಾವೇರಿನಗರ, ಮಂಡ್ಯ-571402

Synopsys

ಭಾರತದ ಸಂವಿಧಾನ ನಿರ್ಮಾತೃ ಡಾ. ಬಿ.ಆರ್. ಅಂಬೇಡ್ಕರ ಅವರ ವಂಶವೃಕ್ಷದ ವಿವರಣೆ ಒಳಗೊಂಡ ಈ ಕೃತಿಯನ್ನು (ಡಾ. ಅಂಬೇಡ್ಕರ ವಂಶವೃಕ್ಷ) ಲೇಖಕ ಗಂಗಾರಾಂ ಚಾಂಡಾಳ ರಚಿಸಿದ್ದಾರೆ. ಡಾ. ಅಂಬೇಡ್ಕರರು ಮಹಾರಾಷ್ಟ್ರ ಮೂಲದ ಮೇಹರ್ ಜನಾಂಗಕ್ಕೆ ಸೇರಿದ್ದು, ಅವರ ಸಂಪೂರ್ಣ ವಂಶವೃಕ್ಷದ ಮಾಹಿತಿಯ ವಿವರ ನೀಡುವುದು ಈ ಕೃತಿಯ ಉದ್ದೇಶ.

About the Author

ಗಂಗಾರಾಂ ಚಂಡಾಳ

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು.  ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...

READ MORE

Related Books