ಡಾ. ಬಿ.ಆರ್. ಅಂಬೇಡ್ಕರ್

Author : ಪೂರ್ಣಿಮಾ ಪೋತೆ

Pages 172

₹ 120.00




Year of Publication: 2019
Published by: ಕುಟುಂಬ ಪ್ರಕಾಶನ
Address: ವರ್ಷಾ ನಿಲಯ, ಪ್ಲಾಟ್ ನಂ.81/82, ಪ್ರಬುದ್ಧನಗರ, ವಿಶ್ವವಿದ್ಯಾಲಯ ಅಂಜೆ, ಕುಸನೂರು ರಸ್ತೆ, ಕಲಬುರಗಿ- 585106

Synopsys

ಯುವ ಲೇಖಕಿ ಪೂರ್ಣಿಮಾ ಎಚ್. ಪೋತೆ ಅವರು ಬರೆದಿರುವ ಅಂಬೇಡ್ಕರ್ ಜೀವನ ಚಿತ್ರಣ ಕೃತಿ ‘ಡಾ.ಬಿ.ಆರ್. ಅಂಬೇಡ್ಕರ್’.

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಭಾರತೀಯರೆಲ್ಲರಿಗೂ ಸ್ಫೂರ್ತಿದಾತರು. ಅವರು ಪ್ರತಿಯೊಬ್ಬರಿಗೂ ಜ್ಞಾನದೀಪ. ಭಾರತದ ಅನನ್ಯತೆಯನ್ನು ಎತ್ತಿ ಹಿಡಿದ ಧೀರ ವ್ಯಕ್ತಿ. ಅವರು ಜನ ಜನರಕ್ಷಕರಾಗಿ ಸಂವಿಧಾನವನ್ನು ನೀಡಿದ್ದು ಭಾರತದ ಬಹುದೊಡ್ಡ ಇತಿಹಾಸ. ಬಾಬಾ ಸಾಹೇಬರನ್ನು ಕುರಿತು ಸರಳವೂ ಸಂಕ್ಷಿಪ್ತವೂ ಸಮಗ್ರ ಜೀವನ ಸಾಧನೆಯ ಚಿತ್ರಣವನ್ನು ಪೂರ್ಣಿಮಾ ಎಚ್.ಪೋತೆ ಅವರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.

About the Author

ಪೂರ್ಣಿಮಾ ಪೋತೆ
(24 May 1994)

ಪೂರ್ಣಿಮಾ ಪೋತೆ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರು. 1994ರ ಮೇ 24 ರಂದು ಜನನ. ಎಂ.ಎ. ಪದವೀಧರರು. ತಂದೆ ಲೇಖಕ ಎಚ್.ಟಿ.ಪೋತೆ, ತಾಯಿ- ಲಲಿತಾ ಎಚ್.ಪೋತೆ. ಇವರು ತಮ್ಕ ಕವಿತೆ, ವೈಚಾರಿಕ ಬರೆಹಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಐದು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಕೃತಿಗಳು- ಮುತ್ತುಗ(ಕವನ ಸಂಕಲನ), ಬುದ್ಧ ಚರಿತೆ(ಲೇಖನ ಸಂಕಲನ), ಡಾ.ಬಿ.ಆರ್. ಅಂಬೇಡ್ಕರ್ ಜನಸಾಮಾನ್ಯರ ರಕ್ಷಕ (ಜೀವನ ಚಿತ್ರಣ). ...

READ MORE

Related Books